ಕಾರವಾರ ನವಲ್ ಶಿಪ್ ಯಾರ್ಡ್ ನಲ್ಲಿ ಅಪ್ರೆಂಟಿಸ್ ಶಿಪ್ ಹುದ್ದೆಗಳು / NAVAL SHIP REPAIR YARD, KARWAR ENROLMENT F


Starts : 30-Nov--0001End : 06-Nov-2018

ಕಾರವಾರದ ನೇವಲ್ ಶಿಪ್ ಯಾರ್ಡ್ ನಲ್ಲಿ ಅಪ್ರೆಂಟಿಸ್ ಶಿಪ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
 
ಒಟ್ಟು ಹುದ್ದೆಗಳ ಸಂಖ್ಯೆ 150
 
ಅರ್ಜಿ ಸಲ್ಲಿಸಲು ನವೆಂಬರ್ 6 ಕೊನೆ ದಿನಾಂಕವಾಗಿದೆ
 
ವಿದ್ಯಾರ್ಹತೆ
ಅಭ್ಯರ್ಥಿಗಳು ಕನಿಷ್ಟ ಶೇಕಡ 50 ಅಂಕಗಳೊಂದಿಗೆ ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಆಯಾ ಟ್ರೇಡ್ ಗೆ ಸಂಬಂಧಪಟ್ಟ ವಿಷಯಗಳಲ್ಲಿ ಕನಿಷ್ಟ ಶೇಕಡ 65 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಐಟಿಐ ಪೂರ್ಣಗೊಳಿಸಬೇಕು.
 
ವಯಸ್ಸು 14 ರಿಂದ 21 ವರ್ಷದೊಳಗಿರಬೇಕು
ಅಂದರೆ 1998 ರ ಏಪ್ರಿಲ್ 1 2005ರ ಮಾರ್ಚ್ 31ರ ನಡುವೆ ಜನಿಸಿರಬೇಕು.
 
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ನೀಡಲಾಗಿದೆ
 
ಈಗಾಗಲೇ ಯಾವುದಾದರೂ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಅಪ್ರೆಂಟಿಸ್ ಶಿಪ್ ಪಡೆದಿರುವ ಅಭ್ಯರ್ಥಿಗಳು ಮತ್ತೆ ಅಪ್ರೆಂಟಿಸ್ಶಿಪ್ ಪಡೆಯಲು ಅವಕಾಶವಿರುವುದಿಲ್ಲ.
 
ಅರ್ಹ ಅಭ್ಯರ್ಥಿಗಳಿಗೆ 2019ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುತ್ತದೆ.
 
ಇದಕ್ಕೆ ಸಂಬಂಧಪಟ್ಟ ಪರೀಕ್ಷಾ ಪ್ರವೇಶ ಪತ್ರವನ್ನು ಇಮೇಲ್ ಮೂಲಕ ಅಭ್ಯರ್ಥಿಗಳಿಗೆ ಕಳುಹಿಸಲಾಗುತ್ತದೆ. ಪರೀಕ್ಷೆ ಆಬ್ಜೆಕ್ಟಿವ್ ಮಾದರಿಯಲ್ಲಿದ್ದು ಮೆಥೆಮೆಟಿಕ್ಸ ಜನರಲ್ ಸೈನ್ಸ್ ಹಾಗೂ ಜನರಲ್ ನಾಲೆಡ್ಜ್ ಗೆ ಸಂಬಂಧಿಸಿದ ಪ್ರಶ್ನೆಗಳು ಕೇಳಲಾಗುತ್ತದೆ.
 
ಆಯ್ಕೆಯಾದ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯ ಕೂಡ ನೀಡಲಾಗುತ್ತದೆ.
 
ನಿಗದಿತ ನಮೂನೆಯಲ್ಲಿ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
 
ಅರ್ಜಿ ಸಲ್ಲಿಸಲು ವಿಳಾಸ
ದಿ ಆಫೀಸರ್ ಇಂಚಾರ್ಜ್ ಡಾಕ್ ಯಾರ್ಡ್ ಅಪ್ರೆಂಟಿಸ್ ಸ್ಕೂಲ್ ನೇವಲ್ ಶಿಪ್ ರಿಪೇರಿ ಯಾರ್ಡ್ ನೇವಲ್ ಬೇಸ್ ಕಾರವಾರ -581308
 
ಸಹಾಯವಾಣಿ 08382 - 233694

 

ಅರ್ಜಿ ಸಲ್ಲಿಸುವ ಫಾರ್ಮ್ 

 

You may also like ->