ಶಿಕ್ಷಕರ ಹುದ್ದೆಗಳ ನೇಮಕಾತಿ 2019

Share

Starts : 15-Jan-2019End : 14-Feb-2019

ನವೋದಯ ವಿದ್ಯಾಲಯದಲ್ಲಿ ಶಿಕ್ಷಕರು  ಹಾಗೂ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ
 
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 251
 
ಹುದ್ದೆಗಳ ಹೆಸರು
ಪ್ರಿನ್ಸಿಪಾಲ್ 25 ಹುದ್ದೆಗಳು
ಅಸಿಸ್ಟೆಂಟ್ ಕಮಿಷನರ್  3 ಹುದ್ದೆಗಳು
ಅಸಿಸ್ಟೆಂಟ್ 2 ಹುದ್ದೆಗಳು
ಕಂಪ್ಯೂಟರ್ ಆಪರೇಟರ್ 3 ಹುದ್ದೆಗಳು
ಪೋಸ್ಟ್ ಗ್ರಾಜುಯೇಟ್ ಟೀಚರ್ 218 ಹುದ್ದೆಗಳು
 
ಪ್ರಿನ್ಸಿಪಾಲ್ ಹುದ್ದೆಗಳಿಗೆ ಕನಿಷ್ಠ ಶೇಕಡ 50 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದು ಜೊತೆಗೆ B.ed ಮಾಡಿರುವ ಅಭ್ಯರ್ಥಿಗಳ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು,
ಅನುಭವ ; ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಶಿಕ್ಷಣ ಸಂಸ್ಥೆಗಳಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕಾದುದು ಕಡ್ಡಾಯವಾಗಿದೆ
 
ಅಸಿಸ್ಟೆಂಟ್ ಕಮಿಷನರ್,ಅಸಿಸ್ಟೆಂಟ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಬೇಕು, ಮತ್ತು
 
 ಅಸಿಸ್ಟೆಂಟ್ ಕಮಿಷನರ್  ಹುದ್ದೆಗಳ ವಿದ್ಯಾರ್ಥಿಗಳು ಫೈನಾನ್ಸಿಯಲ್\ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಕನಿಷ್ಠ ಎಂಟು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು
 
ಕಂಪ್ಯೂಟರ್ ಆಪರೇಟರ್ ಹುದ್ದೆಯ ಅಭ್ಯರ್ಥಿಗಳು ಒಂದು ವರ್ಷ ಕಂಪ್ಯೂಟರ್ ಡಿಪ್ಲೊಮಾ ಮಾಡಿರಬೇಕು
 
ಪೋಸ್ಟ್ ಗ್ರಾಜುಯೇಟ್ ಟೀಚರ್ ಹುದ್ದೆಗಳಿಗೆ ಬಯೋಲಜಿ ಕೆಮೆಸ್ಟ್ರಿ ಕಾಮರ್ಸ್ ಎಕನಾಮಿಕ್ ಜಿಯೋಗ್ರಫಿ ಹಿಂದಿ ಹಿಸ್ಟರಿ ಗಣಿತ ಫಿಸಿಕ್ಸ್ ಮತ್ತು ಐಟಿ ವಿಷಯಗಳಲ್ಲಿ ಪೋಸ್ಟ್ ಗ್ರಾಜುಯೇಟ್  ಟೀಚರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ, ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ b.ed ಮಾಡಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು
 
ವಯೋಮಿತಿ
 ಪ್ರಿನ್ಸಿಪಲ್ ಹುದ್ದೆಗೆ 40 ವರ್ಷ
 ಅಸಿಸ್ಟೆಂಟ್ ಕಮಿಷನರ್ ಹುದ್ದೆಗೆ 45 ವರ್ಷ
 ಅಸಿಸ್ಟೆಂಟ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗೆ 30 ವರ್ಷ ಹಾಗೂ
 ಪೋಸ್ಟ್ ಗ್ರಾಜುಯೇಟ್ ಟೀಚರ್ ಹುದ್ದೆಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ
 
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗಿದೆ
 
ಅರ್ಜಿ ಶುಲ್ಕ
ಪ್ರಿನ್ಸಿಪಾಲ್ ಮತ್ತು ಅಸಿಸ್ಟೆಂಟ್ ಕಮಿಷನರ್ ಹುದ್ದೆಗೆ ರೂಪಾಯಿ 1500
ಅಸಿಸ್ಟೆಂಟ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗೆ ರೂಪಾಯಿ 800
ಪೋಸ್ಟ್ ಗ್ರಾಜುಯೇಟ್ ಟೀಚರ್ ಹುದ್ದೆಗೆ ರೂಪಾಯಿ 1000
 
 ಅಭ್ಯರ್ಥಿಗಳು ಶುಲ್ಕವನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು
 
 ಪರೀಕ್ಷಾ ಕೇಂದ್ರಗಳು
ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 14 2019
ಶುಲ್ಕ ಪಾವತಿಸಲು ಕೊನೆಯ ದಿನಾಂಕ ಫೆಬ್ರುವರಿ 15 2019
ಲಿಖಿತ ಪರೀಕ್ಷೆ ನಡೆಯುವ ದಿನಾಂಕ ಮಾರ್ಚ್ ಕೊನೆ ವಾರ 2019
 
Notification

Website

Apply Link

 

You may also like ->

//