ಭಾರತೀಯ ಸೇನೆಯಲ್ಲಿ ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ - 2019

Share

Starts : 25-Apr-2019End : 08-Jun-2019

ಭಾರತೀಯ ಸೇನೆಯಲ್ಲಿ 100 ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ - 2019
ದೇಶದ ಸೇನಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಭಾರತೀಯ ಸೇನೆಯು ಸಾಮಾನ್ಯ ಕರ್ತವ್ಯ ಮಿಲಿಟರಿ ಪೊಲೀಸ್ 100  ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅಂಬಲಾ, ಲಕ್ನೌ, ಜಬಲ್ಪುರ್, ಬೆಂಗಳೂರು ಮತ್ತು ಶಿಲ್ಲಾಂಗ್ನಲ್ಲಿ ನೇಮಕಾತಿ ರ್ಯಾಲಿಗಳನ್ನು ಆಯೋಜಿಸಲಾಗಿದೆ. ರ್ಯಾಲಿಗಾಗಿ ಕಾರ್ಡ್ಗಳನ್ನು ಪ್ರವೇಶಿಸಿ ನೋಂದಾಯಿತ ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ. ಅಡ್ಮಿಟ್ ಕಾರ್ಡ್ನಲ್ಲಿ ತಿಳಿಸಿದಂತೆ ದಿನಾಂಕ ಮತ್ತು ಸಮಯದ ಮೇಲೆ ಅಭ್ಯರ್ಥಿಗಳು ಸ್ಥಳವನ್ನು ತಲುಪಬೇಕು.
 
ಒಟ್ಟು ಹುದ್ದೆಗಳು - 100
 ಹುದ್ದೆಯ ವಿವರ
1 ಸೋಲ್ಜರ್ ಜನರಲ್ ಡ್ಯೂಟಿ (ಮಹಿಳಾ ಸೇನಾ ಪೊಲೀಸ್) 
ವಿದ್ಯಾರ್ಹತೆಗಳು
ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾದ ಅಥವಾ ತತ್ಸಮಾನ ವಿದ್ಯಾರ್ಥಿಯಲ್ಲಿ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ ಶೇಕಡ 33 ಅಂಕಗಳೊಂದಿಗೆ ಒಟ್ಟಾರೆ ಶೇಖರ 45 ಅಂಕ ಪಡೆದು ಉತ್ತೀರ್ಣರಾದರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
 
ದೈಹಿಕ ಅರ್ಹತೆಗಳು
ಕನಿಷ್ಠ ಎತ್ತರ 142 ಸೆಂಟಿಮೀಟರ್
ಎತ್ತರ ಮತ್ತು ವಯಸ್ಸಿಗೆ ತಕ್ಕಂತೆ ತೂಕ ಹೊಂದಿರಬೇಕು.
 
ದೈಹಿಕ ಸಾಮರ್ಥ್ಯ ಪರೀಕ್ಷೆ
1.6 ಕಿ.ಮೀ .ಓಟ (ಗ್ರೂಪ 1 ಕ್ಕೆ  7 ನಿಮಿಷ  30 ಸೆಕೆಂಡ್ ಗ್ರೂಪ್, 2 ಕ್ಕೆ 8  ನಿಮಿಷಡವರೆಗೆ ಸಮಯ ನಿಗದಿಪಡಿಸಲಾಗಿದೆ.)
ಉದ್ದ ಜಿಗಿತ  - 10 ಅಡಿ, ಎತ್ತರ ಜಿಗಿತ 3 ಅಡಿ ನಡೆಸಲಾಗುತ್ತದೆ.
 
ವಯೋಮಿತಿ
17 ½ ವರ್ಷದಿಂದ 21 ವರ್ಷದ ವಯಸ್ಸಿನೊಳಗಿನವರು. ಅಂದರೆ ಅಕ್ಟೋಬರ್ 1 1998 ರಿಂದ ಎಪ್ರಿಲ್ 1 2002ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಲು ಅರ್ಹರು. ಎಲ್ಲಾದರೂ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿ ವೀರ ಮರಣ ವನ್ನು ಹೊಂದಿರುವ ಸಿಬ್ಬಂದಿಯ ಪತ್ನಿಯ ದಲ್ಲಿ ಗರಿಷ್ಠ 30 ವರ್ಷದ ವರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
 
ಅವಿವಾಹಿತರು ಮಾತ್ರ
ಈ ಹುದ್ದೆಗಳಿಗೆ ಅವಿವಾಹಿತ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
 
ಅರ್ಜಿ ಶುಲ್ಕ  ವಿನಾಯತಿ ನೀಡಲಾಗಿದೆ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 25-04-2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-06-2019
 
website - www.joinindianarmy.nic.in

You may also like ->

//