ಗದಗದಲ್ಲಿ ಸೇನಾ ರ‍್ಯಾಲಿ

Share

Starts : 28-May-2019End : 06-Jun-2019

ಗದಗದಲ್ಲಿ ಸೇನಾ ರ‍್ಯಾಲಿ
28 ಮೇ 2019 ರಿಂದ 06 ಜೂನ್ 2019 ರವರೆಗೆ  ಗದಗದಲ್ಲಿ ಸೇನಾ ರ‍್ಯಾಲಿ
 
ಭಾರತೀಯ ಸೇನಾ ನೇಮಕಾತಿ ರ‍್ಯಾಲಿ ಕರ್ನಾಟಕ 2019 ಭಾರತೀಯ ಸೇನೆಯಲ್ಲಿ ನೇರ ನೇಮಕಾತಿ ಮೇಲೆ ಭಾರತದಾದ್ಯಂತ ಆನ್ಲೈನ್ ​​ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕರ್ನಾಟಕದ ಈ ಜಿಲ್ಲೆಗಳಾದ  ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಈ ಜಿಲ್ಲೆಯವರು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.ಈ ರ‍್ಯಾಲಿಯಲ್ಲಿ ಭಾಗವಹಿಸಲು  ಅಭ್ಯರ್ಥಿಗಳು ಮೊದಲ ಹೆಸರು ನೋಂದಾಯಿಸಿಕೊಳ್ಳಬೇಕಾಗಿದ್ದು, ಇದಕ್ಕೆ ಭಾರತೀಯ ಸೇನೆಯ ವೆಬ್ ಸೈಟ್ ನಲ್ಲಿ ಅವಕಾಶ ನೀಡಲಾಗಿದೆ ಹೆಸರು ನೋಂದಾಯಿಸಿಕೊಳ್ಳಲು ಮೇ 15 ಕೊನೆಯ ದಿನವಾಗಿದೆ. ಹೆಸರು ನೋಂದಾಯಿಸಿಕೊಂಡ ಅಭ್ಯರ್ಥಿಗಳ ಇ ಮೇಲ್ ವಿಳಾಸಕ್ಕೆ ರ‍್ಯಾಲಿಯಲ್ಲಿ ಭಾಗವಹಿಸಲು ಪ್ರವೇಶ ಪತ್ರ ಕಳುಹಿಸಲಾಗುತ್ತದೆ. ಈ ನೇಮಕ ಸಂಪೂರ್ಣ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಒದಗಿಸಲಾಗಿದೆ.
 
ಹುದ್ದೆ ಹೆಸರು
1 ಸೋಲ್ಜರ್ (ಜನರಲ್ ಡ್ಯೂಟಿ)
ವಿದ್ಯಾರ್ಹತೆ
ಎಸ್ ಎಸ್ ಎಲ್ ಸಿ ಯಲ್ಲಿ ಕನಿಷ್ಠ ಶೇಕಡ 45 ಅಂಕ ಪಡೆದು (ಪ್ರತಿ ವಿಷಯದಲ್ಲಿ ಶೇ 33 ಅಂಕ) ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.
 
2 ಸೋಲ್ಜರ್ (ಟೆಕ್ನಿಕಲ್)
ವಿದ್ಯಾರ್ಹತೆ
ವಿಜ್ಞಾನ ವಿಷಯದಲ್ಲಿ (ಫಿಸಿಕ್ಸ್, ಕೆಮಿಸ್ಟ್ರಿ, ಮಾಥ್ಸ್ ಮತ್ತು ಇಂಗ್ಲಿಷ್) ಕನಿಷ್ಠ ಶೇ 50 ಅಂಕಗಳೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಪಾಸಾಗಿರಬೇಕು.
 
3 ಸೋಲ್ಜರ್ (ಟೆಕ್,ನರ್ಸಿಂಗ್ ಅಸಿಸ್ಟೆಂಟ್ ಮತ್ತು ನರ್ಸಿಂಗ್ ಅಸಿಸ್ಟೆಂಟ್ ವೆಟರ್ನರಿ)
ವಿದ್ಯಾರ್ಹತೆ
ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ಮತ್ತು ಇಂಗ್ಲಿಷ್) ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಪ್ರತಿ ವಿಷಯದಲ್ಲೂ ಶೇ 40 ಅಂಕಗಳೊಂದಿಗೆ ಪಾಸಾಗಿರಬೇಕು.
 
4 ಸೋಲ್ಜರ್ (ಕ್ಲರ್ಕ್, ಸ್ಟೋರ್ ಕೀಪರ್, ಟೆಕ್ನಿಕಲ್)
ವಿದ್ಯಾರ್ಹತೆ
ದ್ವಿತೀಯ ಪಿಯುಸಿಯಲ್ಲಿ (ಆರ್ಟ್ಸ್, ಕಾಮರ್ಸ್, ಸೈನ್ಸ್) ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
 
5 ಸೋಲ್ಜರ್ (ಟ್ರೇಡ್ಸ್ ಮನ್ )
ವಿದ್ಯಾರ್ಹತೆ
8 ನೇ  ತರಗತಿ ಪಾಸಾದವರು ಮತ್ತು 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಪ್ರತಿ ವಿಷಯದಲ್ಲೂ ಕನಿಷ್ಠ ಶೇಕಡ 33 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
 
ದೈಹಿಕ ಅರ್ಹತೆ
ಸೋಲ್ಜರ್ (ಟೆಕ್ನಿಕಲ್) ಮತ್ತು ಸೋಲ್ಜರ್ (ಟೆಕ್, ನರ್ಸಿಂಗ್ ಅಸಿಸ್ಟೆಂಟ್ ಮತ್ತು ನರ್ಸಿಂಗ್ ಅಸಿಸ್ಟೆಂಟ್ ವೆಟರ್ನರಿ) ಈ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ 165 ಸೆಂಮೀ ಎತ್ತರ .
ಸೋಲ್ಜರ್ (ಜನರಲ್ ಡ್ಯೂಟಿ) ಮತ್ತು ಸೋಲ್ಜರ್ ಟ್ರೇಡ್ಸ್ ಮನ್ ಹುದ್ದೆಗಳ ಅಭ್ಯರ್ಥಿಗಳು ಕನಿಷ್ಠ 166 ಸೆಂ ಮೀ ಎತ್ತರ,
ಸೋಲ್ಜರ್ (ಕ್ಲರ್ಕ್, ಸ್ಟೋರ್ ಕೀಪರ, ಟೆಕ್ನಿಕಲ್) ಹುದ್ದೆಗಳಿಗೆ 162 ಸೆಂಟಿ ಮೀಟರ್ ಎತ್ತರ ಇರಬೇಕು.
ಈ ಎಲ್ಲಾ ಹುದ್ದೆಗಳಿಗೆ ಎದೆಯ ಸುತ್ತಳತೆ 77 ಸೆಂಟಿಮೀಟರ್ ಹಾಗೂ ತೂಕ 50 ಕೆಜಿ ಇರಬೇಕಾದದ್ದು ಕಡ್ಡಾಯವಾಗಿದೆ.
 
ವಯೋಮಿತಿ
ಕನಷ್ಠ 17 ವರ್ಷ 6 ತಿಂಗಳು ತುಂಬಿರಬೇಕು.
ಸೋಲ್ಜರ್ (ಜನರಲ್ ಡ್ಯೂಟಿ) ಗರಿಷ್ಠ ವಯೋಮಿತಿ 21 ವರ್ಷ ಹಾಗೂ ಉಳಿದೆಲ್ಲ ಹುದ್ದೆಗಳ ಗರಿಷ್ಠ ವಯೋಮಿತಿ 23 ವರ್ಷ ನಿಗದಿಪಡಿಸಲಾಗಿದೆ.
 
ರ್ಯಾಲಿ ನಡೆಯುವ ಸ್ಥಳ
ಜಿಲ್ಲಾ ಕ್ರೀಡಾಂಗಣ, ಗದಗ್
 
ಪ್ರಮುಖ ದಿನಾಂಕಗಳು
ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಮೇ 15 2019.

ಪ್ರವೇಶ ಪತ್ರ ಡೌನ್ಲೋಡ್- ಮೇ 20ರಿಂದ 25 2019ರವರೆಗೆ.

ರ‍್ಯಾಲಿ ನಡೆಯುವ  ದಿನಾಂಕ - 28 ಮೇ 2019 ರಿಂದ 06 ಜೂನ್ 2019 .

website - joinindianarmy.nic.in 

You may also like ->

//