ಬ್ಯಾಂಕ್‌ ನೋಟ್‌ ಪ್ರೆಸ್‌ ನೇಮಕಾತಿ 2019

Share

Starts : 03-Jul-2019End : 02-Aug-2019

ಬ್ಯಾಂಕ್‌ ನೋಟ್‌ ಪ್ರೆಸ್‌ ನೇಮಕಾತಿ 2019
ಸೆಕ್ಯುರಿಟಿ ಪ್ರಿಂಟಿಂಗ್ & ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಪಿಎಂಸಿಐಎಲ್) ಅಡಿಯಲ್ಲಿರುವ ಬ್ಯಾಂಕ್ ನೋಟ್ ಪ್ರೆಸ್, ಗುತ್ತಿಗೆ ಆಧಾರದ ಮೇಲೆ ಮೇಲ್ವಿಚಾರಕ, ಕಿರಿಯ ತಂತ್ರಜ್ಞರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಆಗಸ್ಟ್‌ 02 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 58
 
ಹುದ್ದೆಗಳ ವಿವರ
 
1ಮೇಲ್ವಿಚಾರಕ (ಪ್ರಿಂಟಿಂಗ್‌ ಮತ್ತು ಪ್ಲೇಟ್‌ ಮೇಕಿಂಗ್‌ - 14, ಮೇಲ್ವಿಚಾರಕ ಹವಾನಿಯಂತ್ರಣ - 02 , ಮೇಲ್ವಿಚಾರಕ ಇಂಕ್ ಫ್ಯಾಕ್ಟರಿ - 04,)
ವಿದ್ಯಾರ್ಹತೆ
ಪ್ರಿಂಟಿಂಗ್‌ ಮತ್ತು ಪ್ಲೇಟ್‌ ಮೇಕಿಂಗ್‌ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಿಟಿಂಗ್‌ ಟೆಕ್ನಾಲಜಿಯಲ್ಲಿ ಮೊದಲ ದರ್ಜೆಯಲ್ಲಿ ಡಿಪ್ಲೊಮಾ ಮಾಡಿರಬೇಕು.
ಹವಾನಿಯಂತ್ರಣ ವಿಭಾಗದ ಸೂಪರ್‌ವೈಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಹವಾನಿಯಂತ್ರಣ/ ರೆಫ್ರಿಜರೇಷನ್‌ ಎಂಜಿನಿಯರಿಂಗ್‌ನಲ್ಲಿ ಮೊದಲ ದರ್ಜೆಯಲ್ಲಿ ಡಿಪ್ಲೊಮಾ ಮಾಡಿರಬೇಕು.
ಇಂಕ್‌ ಫ್ಯಾಕ್ಟರಿ ವಿಭಾಗದಲ್ಲಿನ ಸೂಪರ್‌ವೈಸರ್‌ ಹುದ್ದೆಗಳ ಅಭ್ಯರ್ಥಿಗಳು ಡೈಸ್ಟಫ್‌ ಟೆಕ್ನಾಲಜಿ ಅಥವಾ ಪೇಂಟ್‌ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ತೇರ್ಗಡೆಯಾಗಿರಬೇಕು.
ಅಭ್ಯರ್ಥಿಗಳು ಇದೇ ವಿಷಯಗಳಲ್ಲಿ ಬಿಇ/ಬಿಟೆಕ್‌ ಪೂರ್ಣಗೊಳಿಸಿದ್ದರೂ ನೇಮಕದಲ್ಲಿ ಪರಿಗಣಿಸಲಾಗುತ್ತದೆ.
 
2  ಜೂನಿಯರ್ ತಂತ್ರಜ್ಞ (ಕಿರಿಯ ತಂತ್ರಜ್ಞ ಇಂಕ್ ಫ್ಯಾಕ್ಟರಿ - 30,  ಜೂನಿಯರ್ ತಂತ್ರಜ್ಞ ಪ್ರಿಂಟಿಂಗ್‌ ಮತ್ತು ಪ್ಲೇಟ್‌ ಮೇಕಿಂಗ್‌ - 08.)
ವಿದ್ಯಾರ್ಹತೆ
ಇಂಕ್‌ ಫ್ಯಾಕ್ಟರಿ ಮತ್ತು ಪ್ರಿಂಟಿಂಗ್‌ ಆ್ಯಂಡ್‌ ಪ್ಲೇಟ್‌ ಮೇಕಿಂಗ್‌ ವಿಭಾಗದಲ್ಲಿನ ಜೂನಿಯರ್‌ ಟೆಕ್ನಿಷಿಯನ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟ / ಪೂರಕ ವಿಷಯಗಳಲ್ಲಿ ಐಟಿಐ ಮಾಡಿರಬೇಕು.
 
ವಯೋಮಿತಿ
ಕನಿಷ್ಠ -  18 ವರ್ಷಗಳು.
ಮೇಲ್ವಿಚಾರಕರಿಗೆ ಗರಿಷ್ಠ ವಯಸ್ಸು: 30 ವರ್ಷಗಳು.
ಕಿರಿಯ ತಂತ್ರಜ್ಞನಿಗೆ ಗರಿಷ್ಠ ವಯಸ್ಸು:  25 ವರ್ಷಗಳು.
 
ಅರ್ಜಿ ಶುಲ್ಕ (ಜೊತೆಗೆ ಅನ್ವಯವಾಗುವ ಜಿಎಸ್ಟಿ)
ಸಾಮಾನ್ಯ ಮತ್ತು ಒಬಿಸಿಗೆ:  ರೂ .400 / -
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕರಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
 
ಪಾವತಿ ಮೋಡ್
ಆನ್ಲೈನ್ ಮುಖಾಂತರ ಶುಲ್ಕವನ್ನು ಪಾವತಿಸುವುದು.
 
ಪರೀಕ್ಷಾ ಕೇಂದ್ರ: ಬೆಂಗಳೂರು.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :03/07/2019.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :02/08/2019.
ಆನ್‌ಲೈನ್‌ ಪರೀಕ್ಷೆ: ಆಗಸ್ಟ್‌/ ಸೆಪ್ಟೆಂಬರ್‌, 2019.
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification

You may also like ->

//