ನವೋದಯ ವಿದ್ಯಾಲಯ ಸಮಿತಿ ನೇಮಕಾತಿ 2019

Share

Starts : 10-Jul-2019End : 09-Aug-2019

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ 2019
ನವೋದಯ ವಿದ್ಯಾಲಯ ಸಮಿತಿಯಲ್ಲಿ  ಖಾಲಿ ಇರುವ 2370 ಹುದ್ದೆಗಳನ್ನು ಭರ್ತಿ ಮಾಡಲು  ಆನ್‌ಲೈನ್ ಮೂಲಕ ಆಗಸ್ಟ್ 09 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳು - 2370
 
ಹುದ್ದೆಗಳ ವಿವರ
ತರಬೇತಿ ಪಡೆದ ಪದವೀಧರ ಶಿಕ್ಷಕ (ಟಿಜಿಟಿ) (ಗುಂಪು- ಬಿ) - 1154
ಸ್ನಾತಕೋತ್ತರ ಶಿಕ್ಷಕ (ಪಿಜಿಟಿ) (ಗುಂಪು-ಬಿ) - 430
ಶಿಕ್ಷಕರ ವಿವಿಧ ವರ್ಗ (ಗುಂಪು - ಬಿ) - 564 (ಸಂಗೀತ, ಕಲೆ, ಪಿಇಟಿ ಪುರುಷ, ಪಿಇಟಿ ಸ್ತ್ರೀ, ಲಿಬ್.)
ಲೋವರ್ ಡಿವಿಷನ್ ಕ್ಲರ್ಕ್ (ಗುಂಪು - ಸಿ) - 135
ಮಹಿಳಾ ಸಿಬ್ಬಂದಿ ನರ್ಸ್ (ಗುಂಪು - ಬಿ) - 55
ಅಡುಗೆ ಸಹಾಯಕ (ಗುಂಪು - ಸಿ) - 26
ಸಹಾಯಕ ಆಯುಕ್ತರು (ಗುಂಪು ಎ) - 5
ಕಾನೂನು ಸಹಾಯಕ (ಗುಂಪು - ಸಿ) - 1
 
ವಿದ್ಯಾರ್ಹತೆ
ಸಹಾಯಕ ಆಯುಕ್ತರು: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹ್ಯುಮಾನಿಟೀಸ್‌, ಸೈನ್ಸ್‌ ಅಥವಾ ಕಾಮರ್ಸ್‌ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
 
ಸ್ನಾತಕೋತ್ತರ ಶಿಕ್ಷಕ (ಪಿಜಿಟಿ): ಬಯೋಲಜಿ, ಕೆಮಿಸ್ಟ್ರಿ, ಕಾಮರ್ಸ್‌, ಎಕನಾಮಿಕ್ಸ್‌, ಇಂಗ್ಲಿಷ್‌, ಹಿಂದಿ, ಜಿಯೋಗ್ರಫಿ, ಹಿಸ್ಟರಿ, ಕಂಪ್ಯೂಟರ್‌ ಸೈನ್ಸ್‌, ಮ್ಯಾಥ್ಸ್‌ ಮತ್ತು ಫಿಸಿಕ್ಸ್‌ ವಿಷಯಗಳಲ್ಲಿ ಪಿಜಿಟಿಗಳ ನೇಮಕ ನಡೆಯಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್‌ ಮಾಡಿರಬೇಕು.
 
ತರಬೇತಿ ಪಡೆದ ಪದವೀಧರ ಶಿಕ್ಷಕ (ಟಿಜಿಟಿ): ಇಂಗ್ಲಿಷ್‌, ಹಿಂದಿ, ಮ್ಯಾಥ್ಸ್‌, ಸೈನ್ಸ್‌ ಮತ್ತು ಸೋಷಿಯಲ್‌ ಸ್ಟಡೀಸ್‌ ವಿಷಯಗಳಲ್ಲಿ ಟಿಟಿಜಿಗಳ ನೇಮಕ ನಡೆಯಲಿದ್ದು, ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಮತ್ತು ಸಿಟಿಇಟಿ ಅರ್ಹತೆ ಪಡೆದಿರಬೇಕು.
 
ಶಿಕ್ಷಕರ ವಿವಿಧ ವರ್ಗ (ಗುಂಪು - ಬಿ) - 564 (ಸಂಗೀತ, ಕಲೆ, ಪಿಇಟಿ ಪುರುಷ, ಪಿಇಟಿ ಸ್ತ್ರೀ, ಲಿಬ್.): ಮ್ಯೂಸಿಕ್‌, ಆರ್ಟ್‌, ಪಿಇಟಿ (ಮಹಿಳೆಯರು/ ಪುರುಷರು) ಮತ್ತು ಲೈಬ್ರರಿಯನ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಇವುಗಳಿಗೆ ಅರ್ಜಿ ಸಲ್ಲಿಸಲು ಆಯಾ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು. ಈ ಹುದ್ದೆಗಳಿಗೆ ಅನುಭವ ಹೊಂದಿರುವುದು ಅವಶ್ಯಕ.
 
ಕಾನೂನು ಸಹಾಯಕ: ಕಾನೂನು ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಕಾನೂನು ನಿರ್ವಹಣೆ ಕ್ಷೇತ್ರದಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದರೆ ನೇಮಕದಲ್ಲಿ ಪರಿಗಣಿಸಲಾಗುವುದು.
 
ಮಹಿಳಾ ಸಿಬ್ಬಂದಿ ನರ್ಸ್: ಪಿಯುಸಿ ತೇರ್ಗಡೆಯಾಗಿರುವ ಮತ್ತು ಗ್ರೇಡ್‌ ಎ ಡಿಪ್ಲೊಮಾ/ ನರ್ಸಿಂಗ್‌ನಲ್ಲಿ ಸರ್ಟಿಫಿಕೇಟ್‌ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ನರ್ಸಿಂಗ್‌ನಲ್ಲಿ ಬಿಎಸ್ಸಿ ಓದಿರುವ ಮತ್ತು ನರ್ಸಿಂಗ್‌ ಕೌನ್ಸಿಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿರುವ ಜೊತೆಗೆ ಎರಡು ವರ್ಷಗಳ ಸೇವಾನುಭವ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಅಡುಗೆ ಸಹಾಯಕ : ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿ ಬಳಿಕ ಕೆಟರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 
ಲೋವರ್‌ ಡಿವಿಷನ್‌ ಕ್ಲರ್ಕ್‌: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಓದಿರಬೇಕು ಮತ್ತು ನಿಗದಿತ ಟೈಪಿಂಗ್‌ ಸ್ಪೀಡ್‌ ಹೊಂದಿರಬೇಕು.
ಅರ್ಜಿ ಶುಲ್ಕ:
ಸಹಾಯಕ ಕಮಿಷನರ್ - ರೂ. 1500 / -
ಶಿಕ್ಷಕ ಮತ್ತು ಸಿಬ್ಬಂದಿ ನರ್ಸ್ - ರೂ. 1200 / -
ಕಾನೂನು ಸಹಾಯಕ, ಅಡುಗೆ ಮತ್ತು ಎಲ್‌ಡಿಸಿ - ರೂ. 1000 / -
ಎಸ್‌ಸಿ / ಎಸ್‌ಟಿ / ಪಿಎಚ್ ವಿಭಾಗಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ವಿನಾಯತಿ ನೀಡಲಾಗಿದೆ.
ಆನ್ಲೈನ್ ಮುಖಾಂತರ ಶುಲ್ಕವನ್ನು ಪಾವತಿಸುವುದು.
 
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ / ಕಂಪ್ಯೂಟರ್ ಬೇಸ್ ಟೆಸ್ಟ್ (ಸಿಬಿಟಿ) ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :10/07/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :09/08/2019
ಶುಲ್ಕ ಪಾವತಿ ಕೊನೆಯ ದಿನಾಂಕ:12/08/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ<

You may also like ->

//