ಕುವೆಂಪು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರು ನೇಮಕಾತಿಗಾಗಿ ಅರ್ಜಿ ಅಹ್ವಾನ

Share

ಅತಿಥಿ ಉಪನ್ಯಾಸಕರ  265 ಹುದ್ದೆಗಳು
ಇಂಗ್ಲಿಷ್, ಹಿಂದಿ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ, ಸಮಾಜ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ದೈಹಿಕ ಶಿಕ್ಷಣ, ಯೋಗ ಪಿಜಿ ಡಿಪ್ಲೊಮಾ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಜೀವ ರಸಾಯನಶಾಸ, ಔದ್ಯೋಗಿಕ ರಸಾಯನಶಾಸ್ತ್ರ, ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್, ಅನ್ವಯಿಕ ಸಸ್ಯಶಾಸ್ತ್ರ, ಅನ್ವಯಿಕ ಭೂವಿಜ್ಞಾನ, ಅನ್ವಯಿಕ ಪ್ರಾಣಿಶಾಸ್ತ್ರ, ವನ್ಯಜೀವಿ ವಿಭಾಗ, ಸೂಕ್ಷ್ಮಣು ಜೀವಿಶಾಸ್ತ್ರ, ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ, ಎಂಬಿಎ ಅಥವಾ ಕಂಪ್ಯೂಟರ್ ಸೈನ್ಸ್, ಗಣಿತಶಾಸ್ತ್ರ, ಎಂಬಿಎ, ವಾಣಿಜ್ಯಶಾಸ್ತ್ರ, ಎಂಟಿಎ, ಕನ್ನಡ, ಶಿಕ್ಷಣ, ಉರ್ದು, ಸಂಸ್ಕೃತ, ಎಂ ಕಾಂ, ಪರಿಸರ ವಿಜ್ಞಾನ, ಬಿ ಬಿ ಎ, ಮತ್ತು ಬಿಸಿಎ ವಿಷಯಗಳಿಗೆ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
 
ವಿದ್ಯಾರ್ಹತೆ
ಮೇಲ್ಕಾಣಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು ಹಾಗೂ  ಯುಜಿಸಿ ನಿಯಮಾನುಸಾರ ಶೇಕಡಾ 55 ಅಂಕಗಳನ್ನು ಪಡೆದು ಇರಬೇಕು ನೆಟ್/ ಕೆ ಸೆಟ್ ಅಥವಾ ಎಸ್ಎಲ್ಇಟಿ ಯಲ್ಲಿ ಅರ್ಹತೆ ಪಡೆದಿರಬೇಕು ಅಥವಾ ಪಿ ಎಚ್ ಡಿ ಪದವಿಯನ್ನು ಹೊಂದಿರಬೇಕು
 
ಆಯ್ಕೆ ವಿಧಾನ
ಸಂದರ್ಶನದ ಮೂಲಕ
 
ಅರ್ಜಿ ಶುಲ್ಕ
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 100 ರೂ.
* ಉಳಿದೆಲ್ಲಾ  ಅಭ್ಯರ್ಥಿಗಳಿಗೆ 200 ರೂ.
* ಅರ್ಜಿ ಶುಲ್ಕವನ್ನು (ಹಣಕಾಸು ಅಧಿಕಾರಿಗಳು ಕುವೆಂಪು ವಿವಿ. ಶಂಕರ್ಘಟ್ಟ) ಈ ಹೆಸರಿಗೆ ಡಿಡಿ ಮುಖಾಂತರ ಪಾವತಿಸಲು ಸೂಚಿಸಲಾಗಿದೆ.
 
ಅರ್ಜಿ ಸಲ್ಲಿಸುವ ವಿಧಾನ
* ಅರ್ಜಿ ನಮೂನೆಯನ್ನು ವೆಬ್ ಸೈಟ್ ಇಂದ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು
 
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 25

You may also like ->

//