ಬಿಇಎಂಎಲ್‌ ನೇಮಕಾತಿ 2019

Share

Starts : 30-Nov--0001End : 16-Apr-2019

ರಕ್ಷಣಾ ಇಲಾಖೆಯ ಭಾರತ್‌ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್‌) ಡಿಸೈನ್‌ ವಿಭಾಗದಲ್ಲಿ ಎಂಜಿನಿಯರ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿಯ ಮುದ್ರಿತ ಪ್ರತಿಯನ್ನು ಇಂದೇ ( ಏಪ್ರಿಲ್ 16ರೊಳಗೆ) ಕಳಿಸಬೇಕು.
 
ಬಿಇಎಂಎಲ್‌ನ 100ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎನ್ನಲಾಗುತ್ತಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೊದಲ ದರ್ಜೆಯಲ್ಲಿ ಪದವಿ (ಡಿಸೈನ್‌) ಅಥವಾ ಬಿಇ/ಬಿಟೆಕ್‌ (ಮೆಕ್ಯಾನಿಕಲ್‌/ ಆಟೋಮೊಬೈಲ್‌/ ಪ್ರೊಡಕ್ಷನ್‌/ ಎಲೆಕ್ಟ್ರಿಕಲ್‌/ ಎಲೆಕ್ಟ್ರಾನಿಕ್ಸ್‌) ಪೂರ್ಣಗೊಳಿಸಿರಬೇಕು. ಇಂಡಸ್ಟ್ರಿಯಲ್‌ ಡಿಸೈನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿತ್ತು. ಅಲ್ಲದೆ, ಅಭ್ಯರ್ಥಿಗಳಿಗೆ ನಾಲ್ಕು ವರ್ಷಗಳ ಸೇವಾನುಭವ ಕಡ್ಡಾಯವಾಗಿದೆ.
 
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 29 ವರ್ಷ. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
 
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
 
ಅರ್ಜಿ ಸಲ್ಲಿಸಲು ಏಪ್ರಿಲ್‌ 9 ಸಂಜೆ 5.30ರವರೆಗೆ ಕಾಲಾವಕಾಶವಿತ್ತು. ಈ ಹಿನ್ನೆಲೆ ಸದ್ಯ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಮುಗಿದಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದವರು ಅರ್ಜಿಯ ಮುದ್ರಿತ ಪ್ರತಿಯನ್ನು ಏಪ್ರಿಲ್‌ 16ರೊಳಗೆ ಈ ವಿಳಾಸಕ್ಕೆ ಕಳುಹಿಸಿಕೊಡಿ. Manager (HR), BEML Limited, Recruitment Cell BEML Soudha No.23/1, 4th Main Road S.R Nagar, Bangalore - 560027
 
ವೇತನ ಶ್ರೇಣಿ: 40,000 -1,40,000 ರೂ.
 
ಸಹಾಯವಾಣಿ: 080 - 22963279
 
ವೆಬ್‌ ವಿಳಾಸ: link
 

You may also like ->

//