ವಿಜಯಪುರ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ 2019

Share

Starts : 30-Nov--0001End : 30-Nov--0001

ವಿಜಯಪುರ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ 2019
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯು ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಕಾರ್ಯನಿರ್ವಹಿಸಲು ವಿವಿಧ  ಹುದ್ದೆಗಳನ್ನು ಗುತ್ತಿಗೆ ಆಧಾರ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹವುದು.
 
ಹುದ್ದೆಗಳ ವಿವರ
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ -15
ವಿದ್ಯಾರ್ಹತೆ -ಎಎನ್‌ಎಂ ತರಬೇತಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
 
ಶುಶ್ರೂಷಕಿ(ಲಕ್ಷ್ಯ ಕಾರ್ಯಕ್ರಮ)- 10
ವಿದ್ಯಾರ್ಹತೆ - ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ನಲ್ಲಿ ಹೆಸರು ನೋಂದಾಯಿಸಿರುವ ಬಿಎಸ್ಸಿ ಪದವೀಧರರು ಅರ್ಜಿ ಸಲ್ಲಿಸಬಹುದು.
 
ಶುಶ್ರೂಷಕಿ(ಜಿಲ್ಲಾಸ್ಪತ್ರೆ ಎಂಸಿಎಚ್‌ ವಿಭಾಗ) -16
ವಿದ್ಯಾರ್ಹತೆ - ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಜಿಎನ್‌ಎಂ/ ಡಿಪ್ಲೊಮಾ ಇನ್‌ ನರ್ಸಿಂಗ್‌ ಪದವಿಯನ್ನು ಹೊಂದಿರುವ ಹಾಗೂ ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ನಲ್ಲಿ ಹೆಸರು ನೋಂದಾಯಿಸಿರುವವರು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
 
ಸ್ತ್ರೀರೋಗ ತಜ್ಞರು, ಚಿಕ್ಕ ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ಇಎನ್‌ಟಿ ತಜ್ಞರು, ಮನೋರೋಗ ತಜ್ಞರು -12
ವಿದ್ಯಾರ್ಹತೆ -ಈ ತಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್‌ ಬಳಿಕ ಸಂಬಂಧಪಟ್ಟ ಆಯಾ ತಜ್ಞ ವಿಷಯಗಳಲ್ಲಿ ಎಂಡಿ ವ್ಯಾಸಂಗ ಪೂರ್ಣಗೊಳಿಸಿರಬೇಕು.
 
ನೇತ್ರ ಸಹಾಯಕರು - 03
ವಿದ್ಯಾರ್ಹತೆ - ಅಂಗೀಕೃತ ವಿವಿಯಿಂದ ಡಿಪ್ಲೊಮಾ (ಅಪ್ಟೋಮೆಟ್ರಿ) ಹಾಗೂ ಕಂಪ್ಯೂಟರ್‌ ಜ್ಞಾನ ಅಥವಾ ಡಿಫಾರ್ಮ ಪದವಿ ಅಥವಾ ಡಿಪ್ಲೊಮಾ (ಫಾರ್ಮಸಿ) ವಿದ್ಯಾರ್ಹತೆ ಹೊಂದಿರಬೇಕು.
 
ಡೆಂಟಲ್‌ ಹೈಜಿನಿಸ್ಟ್‌ - 01
ವಿದ್ಯಾರ್ಹತೆ - ಡೆಂಟಲ್‌ ಹೈಜಿನಿಸ್ಟ್‌ ವಿಷಯದಲ್ಲಿ ಪದವಿ ಹಾಗೂ ಡೆಂಟಲ್‌ ಕೌನ್ಸಿಲ್‌ ಆಫ್‌ ಇಂಡಿಯಾದಿಂದ ಮಾನ್ಯತೆ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಎರಡು ವರ್ಷಗಳ ಸೇವಾನುಭವ ಅಗತ್ಯ.
 
ಆಡಿಯೋಲಾಜಿಸ್ಟ್‌ - 01
ವಿದ್ಯಾರ್ಹತೆ - ಈ ಹುದ್ದೆಗೆ ಆಡಿಯೋಲಜಿ ಮತ್ತು ಸ್ಪೀಚ್‌ ಲಾಂಗ್ವೇಜ್‌ ಪೆಥಾಲಜಿಯಲ್ಲಿ 4 ವರ್ಷದ ಪದವಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
 
ಫಿಜಿಯೋಥೆರಪಿಸ್ಟ್‌ - 01
ವಿದ್ಯಾರ್ಹತೆ - ಫಿಜಿಯೋಥೆರಪಿಯಲ್ಲಿ ಪದವಿ ಹಾಗೂ ಫಿಜಿಯೋಥೆರಪಿ ಕೌನ್ಸಿಲ್‌ ಆಫ್‌ ಇಂಡಿಯಾದಿಂದ ಸದಸ್ಯತ್ವ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
 
ವಯೋಮಿತಿ
ಗರಿಷ್ಠ - 40 ವರ್ಷಗಳು
ಮೀಸಲಾತಿ ವ್ಯಾಪ್ತಿಗೊಳಪಡುವ ಅಭ್ಯರ್ಥಿಗಳಿಗೆ ಸರಕಾರದ ನಿಯಮಾವಳಿಗಳ ಸಡಿಲಿಕೆ ಕೆಲಪಿಸಲಾಗಿದೆ.
 
ವೇತನ ವಿವರ
ರೂ 10,500 - 1,30,000 ರೂ
 
ನೇಮಕ ಪ್ರಕ್ರಿಯೆ
ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಗೆ ಅನುಗುಣವಾಗಿ ತಾತ್ಕಾಲಿಕ  ಆಯ್ಕೆ ಪಟ್ಟಿಯನ್ನು ಜುಲೈ 05 ರಂದು ಪ್ರಕಟಿಸಲಾಗುತ್ತದೆ.
ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳನ್ನು ಮೊದಲು ಆದ್ಯತೆ ನೀಡಲಾಗುವದು.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :26/06/2019
ತಾತ್ಕಾಲಿಕ  ಆಯ್ಕೆ ಪಟ್ಟಿ  ದಿನಾಂಕ:05/07/2019
 
ಹೆಚ್ಚಿನ ಮಾಹಿತಿಗಾಗಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಂಪರ್ಕಿಸಿ.
ಸಹಾಯವಾಣಿ - 08352-250107 / 9449843103.

You may also like ->

//