ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌' ನೇಮಕಾತಿ 2019

Share

Starts : 03-Jul-2019End : 23-Jul-2019

'ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌' ನೇಮಕಾತಿ 2019
'ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌'ನಲ್ಲಿ ಖಾಲಿ ಇರುವ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ ಸೇರಿದಂತೆ ಖಾಲಿ ಇರುವ 129 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಇದೇ ಜುಲೈ 23 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 129 ಹುದ್ದೆಗಳು
 
ಹುದ್ದೆಗಳ ವಿವರ
ಜೂನಿಯರ್ ಎಂಜಿನಿಯರಿಂಗ್ ಸಹಾಯಕ- IV (ಉತ್ಪಾದನೆ) - 74 ಹುದ್ದೆಗಳು
ಜೂನಿಯರ್ ಎಂಜಿನಿಯರಿಂಗ್ ಸಹಾಯಕ- IV (ಪಿ & ಯು) - 26 ಹುದ್ದೆಗಳು
ಜೂನಿಯರ್ ಎಂಜಿನಿಯರಿಂಗ್ ಸಹಾಯಕ- IV (ಎಲೆಕ್ಟ್ರಿಕಲ್) / ಜೂನಿಯರ್ ತಾಂತ್ರಿಕ ಸಹಾಯಕ- IV - 3 ಹುದ್ದೆಗಳು
ಜೂನಿಯರ್ ಎಂಜಿನಿಯರಿಂಗ್ ಸಹಾಯಕ- IV (ಎಲೆಕ್ಟ್ರಿಕಲ್) / ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- IV - 17 ಹುದ್ದೆಗಳು
ಜೂನಿಯರ್ ಎಂಜಿನಿಯರಿಂಗ್ ಸಹಾಯಕ- IV (ಉಪಕರಣ) / ಕಿರಿಯ ತಾಂತ್ರಿಕ ಸಹಾಯಕ- IV - 3 ಹುದ್ದೆಗಳು
ಜೂನಿಯರ್ ಎಂಜಿನಿಯರಿಂಗ್ ಸಹಾಯಕ- IV (ಅಗ್ನಿಶಾಮಕ ಮತ್ತು ಸುರಕ್ಷತೆ) - 4 ಹುದ್ದೆಗಳು
ಕಿರಿಯ ಗುಣಮಟ್ಟ ನಿಯಂತ್ರಣ ವಿಶ್ಲೇಷಕ- IV - 3 ಪೋಸ್ಟ್‌ಗಳು
 
ವಿದ್ಯಾರ್ಹತೆ
ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌: ಪ್ರೊಡಕ್ಷನ್‌, ಇನ್‌ಸ್ಟ್ರುಮೆಂಟೇಶನ್‌ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೆಮಿಕಲ್‌, ರಿಫೈನರಿ ಆ್ಯಂಡ್‌ ಪೆಟ್ರೊಕೆಮಿಕಲ್‌/ ಬಿಎಸ್ಸಿ ಅಥವಾ ಮೆಕ್ಯಾನಿಕಲ್‌/ ಎಲೆಕ್ಟ್ರಿಕಲ್‌/ ಮೆಕ್ಯಾನಿಕಲ್‌/ ಇನ್‌ಸ್ಟ್ರುಮೆಂಟೇಶನ್‌/ ಇನ್‌ಸ್ಟ್ರುಮೆಂಟೇಶನ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌/ ಇನ್‌ಸ್ಟ್ರುಮೆಂಟೇಶನ್‌ ಆ್ಯಂಡ್‌ ಕಂಟ್ರೋಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರು ತಮ್ಮ ವಿದ್ಯಾರ್ಹತೆಗನುಗುಣವಾಗಿ ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಫೈರ್‌ ಮತ್ತು ಸೇಫ್ಟಿ ವಿಭಾಗದಲ್ಲಿಯೂ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ನಂತರ ಸಬ್‌ ಆಫೀಸರ್ಸ್‌ ಕೋರ್ಸ್‌ ಜೊತೆಗೆ ಭಾರೀ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಜೂನಿಯರ್‌ ಕ್ವಾಲಿಟಿ ಕಂಟ್ರೋಲ್‌ ಅನಾಲಿಸ್ಟ್‌ ಹುದ್ದೆಗಳಿಗೆ ಬಿಎಸ್ಸಿ (ಫಿಸಿಕ್ಸ್‌/ ಕೆಮಿಸ್ಟ್ರಿ/ ಇಂಡಸ್ಟ್ರೀಯಲ್‌ ಕೆಮಿಸ್ಟ್ರಿ/ ಮ್ಯಾಥ್ಸ್‌) ಓದಿರಬೇಕು. ವಿದ್ಯಾರ್ಹತೆ ಜೊತೆಗೆ ಆಯಾ ಹುದ್ದೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಒಂದು ವರ್ಷದ ಸೇವಾನುಭವ ಹೊಂದಿರುವುದು ಕಡ್ಡಾಯ. ಅವುಗಳ ಸಂಪೂರ್ಣ ವಿವರ ವೆಬ್‌ನಲ್ಲಿ ಲಭ್ಯವಿದೆ.
 
ವಯೋಮಿತಿ
ಕನಿಷ್ಠ ವಯಸ್ಸು 18 ವರ್ಷ.
ಗರಿಷ್ಠ 24 ವರ್ಷ.
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಒಬಿಸಿ, ಎಸ್‌ಸಿ/ಎಸ್‌ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

 

ಆಯ್ಕೆ ವಿಧಾನ
1. ಲಿಖಿತ ಪರೀಕ್ಷೆ
2. ಕೌಶಲ್ಯ / ಪ್ರಾವೀಣ್ಯತೆ / ದೈಹಿಕ ಪರೀಕ್ಷೆ
 
ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ 150 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಎಸ್‌ಸಿ/ಎಸ್‌ಟಿ/ ವಿಕಲಚೇತನರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯ್ತಿ ನೀಡಲಾಗಿದೆ.
 
ಸೂಚನೆ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಮುದ್ರಿತ ಪ್ರತಿಯನ್ನು ಆಗಸ್ಟ್‌ 4 ರೊಳಗೆ ಅಂಚೆಯ ಮೂಲಕ ಸಲ್ಲಿಸಬೇಕು.
 
ಅಂಚೆ ವಿಳಾಸ
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಹಲ್ಡಿಯಾ ರಿಫೈನರಿಗೆಸಲ್ಲಿಸಬಹುದು. ಪಿಒ ಬಾಕ್ಸ್ ಸಂಖ್ಯೆ 1, ಪಿಒ ಹಲ್ಡಿಯಾ ಆಯಿಲ್ ರಿಫೈನರಿ ಜಿಲ್ಲೆ: ಪುರ್ಬಾ ಮದಿನಿಪುರ, ಪಶ್ಚಿಮ ಬಂಗಾಳ, ಪಿನ್: 721606
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 03/07/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification
 

You may also like ->

//