ದಾವಣಗೇರೆ ಅಂಗನವಾಡಿಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ 2018

Share

Starts : 29-Jun-2018End : 25-Jul-2018

ದಾವಣಗೆರೆ ಜಿಲ್ಲೆಯ 06 ಶಿಶು ಅಭಿವೃಧಿ ಯೋಜನೆ ವ್ಯಾಪ್ತಿಯ ಈ ಕೆಳಗೆ ಕಾಣಿಸಲಾದ ಗ್ರಾಮಗಳ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆ ಹಾಗೂ ಸಹಾಯಕಿಯಾಗಿ ಗೌರವಸೇವೆ ಸಲ್ಲಿಸಲು ಈ ಕೆಳಗೆ ತೋರಿಸಲಾದ ಮೀಸಲಾತಿ ಹೊಂದಿದ  18 ರಿಂದ 35 ವರ್ಷದೊಳಗಿನ ಸಾಮಾನ್ಯ ವರ್ಗದವರು ಮತ್ತು ಕಾರ್ಯಕರ್ತೆಯರ ನೇಮಕಾತಿಗೆ 18 ರಿಂದ 45 ವರ್ಷದೊಳಗಿನ ವಿಕಲಚೇತನ ವರ್ಗದ ಅರ್ಹ ಸ್ಥಳೀಯ (ಅದೇ ಗ್ರಾಮದ ) ಮಹಿಳಾ ಅಭ್ಯರ್ಥಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಿದೆ. ಅಂಗನವಾಡಿ ಕಾರ್ಯಕರ್ತೆಯಾಗಲು ಎಸ್ಸೆಸ್ಸೆಲ್ಸಿ ಯಲ್ಲಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯರಾಗಲು ಕನಿಷ್ಠ 4ನೇ ತರಗತಿ ತೇರ್ಗಡೆಯಾಗಿದ್ದು ,ಗರಿಷ್ಠ ವಿದ್ಯಾರ್ಹತೆ  9ನೇ ತರಗತಿ ತೇರ್ಗಡೆಯಾಗಿರಬೇಕು .

ಅರ್ಜಿಗಳನ್ನು ದಿನಾಂಕ 25/07/2018 ರ ಅಪರಾಹ್ನ 5.30 ಗಂಟೆಯೊಳಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು :

1  ಮಾಹಿತಿಯನ್ನು ಭರ್ತಿ ಮಾಡಿದ ಅರ್ಜಿ (ಆನ್ಲೈನ್ )

2  ಜನನ ಪ್ರಮಾಣ ಪತ್ರ /ಜನ್ಮದಿನಾಂಕ ಇರುವ ಎಸ್ಸೆಲ್ಸಿ ಅಂಕಪಟ್ಟಿ 

ತಹಶೀಲ್ದಾರರು /ಉಪತಹಶೀಲ್ದಾರರು ಪಡೆದ 1 ವರ್ಷದೊಳಗಿನ ವಾಸಸ್ಥಳ  ದೃಡೀಕರಣ ಪತ್ರ 

4  ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ (ಕಾರ್ಯಕರ್ತೆ ಹುದ್ದೆಗೆ 9ನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರು ಎಸ್ಸೆಲ್ಸಿತೇರ್ಗಡೆ                    ಹೊಂದಿದ ಅಂಕಪಟ್ಟಿಯನ್ನು ಲಗತ್ತಿಸುವುದು )

ವಿದ್ಯಾರ್ಹತೆ ಬಗ್ಗೆ ಪ್ರಮಾಣಪತ್ರ (ಸಹಾಯಕಿ ಹುದ್ದೆಗೆ  9ನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರು ಒಂಬತ್ತನೇ ತರಗತಿಯ               ಅಂಕಪಟ್ಟಿಯನ್ನು ಲಗತ್ತಿಸುವುದು )

6  ಮೀಸಲಾತಿ ಅಭ್ಯರ್ಥಿಗಳ ಪ್ರಮಾಣ ಪತ್ರ 

7  ಪತಿಯ ಮರಣ ಪ್ರಮಾಣ ಪತ್ರ 

8  ಆತ್ಮ ಹತ್ಯೆ ಮಾಡಿಕೊಂಡ ರೈತರ ಪತ್ನಿ ಎಂದು ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.

ವೆಬ್ಸೈಟ್ ವಿಳಾಸ 

You may also like ->

//