ಜಲ ಸಂಪನ್ಮೂಲ ಇಲಾಖೆಯಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ,

Share

Starts : 24-Sep-2018End : 23-Oct-2018

ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವೃಂದದ ಚಾಲಕರ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ನೇರ ನೇಮಕಾತಿ ಮೂಲಕ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ದ್ವಿಪ್ರತಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ಅಧ್ಯಕ್ಷರು ವಾಹನ ಚಾಲಕರ ನೇಮಕಾತಿ ಸಮಿತಿ ಹಾಗೂ ಮುಖ್ಯ ಎಂಜಿನಿಯರ್ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಇವರಲ್ಲಿ ಕಚೇರಿ ವೇಳೆಯಲ್ಲಿ ಈ ಕೆಳಗಿನಂತೆ ಶುಲ್ಕ ಪಾವತಿಸಿ  ಅರ್ಜಿಯನ್ನು ಪಡೆಯತಕ್ಕದ್ದು

 

ಒಟ್ಟು ಹುದ್ದೆಗಳು 

10

ಅರ್ಜಿಗಳ ವಿತರಣೆ ಸೆಪ್ಟೆಂಬರ್ 24 ರಿಂದ ಶುರು ಶುರುವಾಗಲಿದೆ

 

ವಿದ್ಯಾರ್ಹತೆ

ಅಭ್ಯರ್ಥಿಗಳು 7ನೇ ತರಗತಿಯಲ್ಲಿ  ಉತ್ತೀರ್ಣರಾಗಿರಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಲಘು ಮೋಟಾರು ವಾಹನ ಚಾಲನಾ ಪತ್ರ ಮತ್ತು ಪ್ರಥಮ ಚಿಕಿತ್ಸೆ ಪ್ರಮಾಣ ಪತ್ರ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

 

ವಯೋಮಿತಿ

ಅಭ್ಯರ್ಥಿಗಳಿಗೆ ಕನಿಷ್ಠ 18 ಗರಿಷ್ಠ 35 ವರ್ಷ ವಯೋಮಿತಿಯ ನಿಗದಿ ಮಾಡಲಾಗಿದೆ.

 ಎಸ್ ಸಿ ಎಸ್ ಟಿ 5 ವರ್ಷ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ನೀಡಲಾಗಿದೆ

 

ಆಯ್ಕೆ ವಿಧಾನ 

ಚಾಲನಾ ಪರವಾನಿಗೆ ಪಡೆದ ದಿನಾಂಕ ಮತ್ತು ವಯಸ್ಸಿನ ಪರಿಗಣನೆಯೊಂದಿಗೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನ/ಚಾಲನಾ ಪರೀಕ್ಷೆಗೆ  ಕರೆಯಲಾಗುವುದು 

 

ಭರ್ತಿ ಮಾಡಿದ ಅರ್ಜಿಗಳನ್ನು 100 ರೂ ಶುಲ್ಕದ ಡಿಡಿ ಯೊಂದಿಗೆ ಅಕ್ಟೋಬರ್ 23 ರೊಳಗೆ ತಲುಪುವಂತೆ ಅಧ್ಯಕ್ಷರು ವಾಹನ  ಚಾಲಕರ ನೇಮಕಾತಿ ಸಮಿತಿ ಹಾಗೂ ಮುಖ್ಯ ಇಂಜಿನಿಯರ್ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಬೆಂಗಳೂರು ವಿಳಾಸಕ್ಕೆ ಕಳುಹಿಸಬೇಕು ಇಲ್ಲವೇ ಖುದ್ದಾಗಿ ಸಲ್ಲಿಸಬೇಕು

 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 24-09-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-10-2018

 

ನೋಟಿಫಿಕೇಶನ್ 

You may also like ->

//