ಬೆಳಗಾವಿ ಜಿಲ್ಲಾ ನ್ಯಾಯಾಲದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 25-Sep-2018End : 25-Oct-2018

ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು 

ಹುದ್ದೆಗಳ ವಿವರ

ಹುದ್ದೆಯ ಹೆಸರು ಶೀಘ್ರಲಿಪಿಗಾರರು 

ಹುದ್ದೆಗಳ ಸಂಖ್ಯೆ  9

ವೇತನ ಶ್ರೇಣಿ 27,650/- ರಿಂದ 52,650/- ರವರೆಗೆ 

 

ವಿದ್ಯಾರ್ಹತೆ :

10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿ ಸೀನಿಯರ್ ಮತ್ತು ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಸೀನಿಯರ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಸೆಕ್ರೆಟರಿ ಯಲ್ ಪ್ರಾಕ್ಟಿಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಯ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯವನ್ನು ಐಚ್ಚಿಕ ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು. 


ಅರ್ಹತಾ ಪರೀಕ್ಷೆ
ಅಭ್ಯರ್ಥಿಗಳಿಗೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಒಂದು ನಿಮಿಷಕ್ಕೆ 120 ಪದಗಳಂತೆ 5 ನಿಮಿಷಗಳ ಉಕ್ತಲೇಖನ ನೀಡಿ ನಂತರ 45 ನಿಮಿಷಗಳ ಅವಧಿಯಲ್ಲಿ ಬೆರಳಚ್ಚು ಯಂತ್ರದ ಮೇಲೆ ಲಿಪ್ಯಂತರ ಮಾಡಲು ಹೇಳಲಾಗುವುದು


ಹುದ್ದೆ ಹೆಸರು ಬೆರಳಚ್ಚುಗಾರರು

ಒಟ್ಟು ಹುದ್ದೆಗಳು 13

ವೇತನ ಶ್ರೇಣಿ  21400/- ರಿಂದ 42,000/- 

ವಿದ್ಯಾರ್ಹತೆ: 

ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿ ರಬೇಕು ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಸೀನಿಯರ್ ಮತ್ತು ಸೆಕ್ರೆಟರಿ ಯಲ್ ಪ್ರಾಕ್ಟಿಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಯ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯವನ್ನು ಐಚ್ಚಿಕ ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು. 

ಅರ್ಹತಾ ಪರೀಕ್ಷೆ
ಅಭ್ಯರ್ಥಿಗೆ 15 ನಿಮಿಷಗಳ ಅವಧಿಯಂತೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬೆರಳಚ್ಚು ಮಾಡಲು ಉಕ್ತಲೇಖನ ನೀಡಲಾಗುವುದು 

ಹುದ್ದೆ ಹೆಸರು ಬೆರಳಚ್ಚು ನಕಲುಗಾರರು

ಒಟ್ಟು ಹುದ್ದೆಗಳ ಸಂಖ್ಯೆ 3 

ವೇತನ ಶ್ರೇಣಿ 21,000/- 42,000/-

ವಿದ್ಯಾರ್ಹತೆ 
ಅಭ್ಯರ್ಥಿಗಳು ಎಸೆಸೆಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು , ಕನ್ನಡ ಹಾಗೂ ಆಂಗ್ಲ ಬೆರಳಚ್ಚು ಜೂನಿಯರ್ ಅಥವಾ ತತ್ಸಮಾನ  ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯಗಳನ್ನು ಐಚ್ಚಿಕ ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು
ಅರ್ಹತಾ ಪರೀಕ್ಷೆ 
ಅಭ್ಯರ್ಥಿಗೆ 15 ನಿಮಿಷಗಳ ಅವಧಿಯಂತೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬೆರಳಚ್ಚು ಮಾಡಲು ಉಕ್ತಲೇಖನ ನೀಡಲಾಗುವುದು 

ಹುದ್ದೆ ಹೆಸರು  ವಾಹನ ಚಾಲಕರು

ಒಟ್ಟು ಹುದ್ದೆಗಳ ಸಂಖ್ಯೆ 1

ವೇತನ ಶ್ರೇಣಿ  21400/- ರಿಂದ 42,000/- 

 

ವಿದ್ಯಾರ್ಹತೆ 
ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು  ಮತ್ತು ಅಭ್ಯರ್ಥಿಯು ಲಘು ವಾಹನ ಹಾಗೂ ಭಾರಿ ವಾಹನ ಚಾಲನ ಪರವಾನಿಗೆ ಪತ್ರವನ್ನು ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದಿರತಕ್ಕದ್ದು.  

 

ಅರ್ಹತಾ ಪರೀಕ್ಷೆ
ಅಭ್ಯರ್ಥಿಯು ವಾಹನ ಚಾಲನಾ ಅರ್ಹತೆಯನ್ನು ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುವುದು ತದನಂತರ ಮೌಖಿಕ ಸಂದರ್ಶನ ನಡೆಸಲಾಗುವುದು

ಹುದ್ದೆ ಹೆಸರು 

ಆದೇಶ ಜಾರಿಕಾರರು 

ಒಟ್ಟು ಹುದ್ದೆಗಳ ಸಂಖ್ಯೆ 26 

ವೇತನ ಶ್ರೇಣಿ ರೂ 19,950/-  37,900/- 

ವಿದ್ಯಾರ್ಹತೆ : ಅಭ್ಯರ್ಥಿಗಳು ಎಸೆಸೆಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು ಲಘು ವಾಹನ ಹಾಗೂ ಭಾರಿ ವಾಹನ ಚಾಲನಾ ಪತ್ರ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು 

 

ವಯೋಮಿತಿ 
ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 40 ವರ್ಷಗಳು 
ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ 38 ವರ್ಷ ಗಳು 

 

ಅರ್ಜಿ ಶುಲ್ಕ

ಪ್ರವರ್ಗ 2 ಎ 2ಬಿ 3ಎ 3ಬಿ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 

ಶೀಘ್ರಲಿಪಿಗಾರರು  ರೂ 250/-

ಬೆರಳಚ್ಚುಗಾರರು ಅಥವಾ ಬೆರಳಚ್ಚು ನಕಲು ಗಾರರು ರೂ 200/-

ಆದೇಶ ಜಾರಿಕಾರರ ಹುದ್ದೆಗಳಿಗೆ ರೂ 150/-

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ 

 

ನಿಗದಿತ ಶುಲ್ಕವನ್ನು ಡಿಡಿ ಮುಖಾಂತರ ಮಾತ್ರ ಸ್ವೀಕರಿಸಲಾಗುವುದು 

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಸಂಬಂಧಿಸಿದ ಹುದ್ದೆಯ ಲಕೋಟೆಯ ಮೇಲೆ ಕಡ್ಡಾಯವಾಗಿ ತಾವು ಸಲ್ಲಿಸಲಿಚ್ಚಿಸುವ ಹುದ್ದೆಯ ಹೆಸರನ್ನು ದಪ್ಪ ಅಕ್ಷರಗಳಲ್ಲಿ ತಪ್ಪದೆ ನಮೂದಿಸಬೇಕು

ಅರ್ಜಿ ಸಲ್ಲಿಸಬೇಕಾದ ವಿಳಾಸ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೆಳಗಾವಿ

 ಸಲ್ಲಿಸಲು ಕೊನೆಯ ದಿನಾಂಕ 25-10-2018

 

ನೋಟಿಫಿಕೇಶನ್ ಲಿಂಕ್ 
 

You may also like ->

//