ಭೂಮಿ ಕೇಂದ್ರ ಮತ್ತು ನಾಡ ಕಚೇರಿ ಯಲ್ಲಿ ಖಾಲಿ ಹುದ್ದೆಗಳು Kolar Village Accountant Recruitment-2018

Share

Starts : 16-Oct-2018End : 15-Nov-2018

ಕೋಲಾರ ಜಿಲ್ಲೆಯಲ್ಲಿ ನಾಡ ಕಚೇರಿ ಹಾಗೂ ಭೂಮಿ ಕೇಂದ್ರ ಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

ಒಟ್ಟು ಹುದ್ದೆಗಳ ಸಂಖ್ಯೆ 62

 

ವಿದ್ಯಾರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕು ಕಂಪ್ಯೂಟರ್ ಫಂಡಮೆಂಟಲ್ ಎಂ ಎಸ್ ಆಫೀಸ್ ಎಂ ಎಸ್ ವರ್ಡ್ ಎಂ ಎಸ್ ಎಕ್ಸೆಲ್ ಎಂ ಎಸ್ ಎಕ್ಸೆಸ್ ಪವರ್ಪಾಯಿಂಟ್ ಮತ್ತು ಇಂಟರ್ನೆಟ್ ಜ್ಞಾನ ಹೊಂದಿರುವ ಬಗ್ಗೆ ಅಂಗೀಕೃತ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು

 

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ

ಸಾಮಾನ್ಯ ವರ್ಗಗಳ ಗರಿಷ್ಠ ವಯೋಮಿತಿ 35ವರ್ಷ

ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ದಲ್ಲಿ ಗರಿಷ್ಠ ವಯೋಮಿತಿ 38 ವರ್ಷಕ್ಕೆ ನಿಗದಿಪಡಿಸಲಾಗಿದೆ ಮತ್ತು

ಪ್ರವರ್ಗ-1 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷಕ್ಕೆ ನಿಗದಿಪಡಿಸಲಾಗಿದೆ

 

ಅರ್ಜಿ ಶುಲ್ಕ

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ  ಪ್ರವರ್ಗ 1 ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ 100/-

ಸಾಮಾನ್ಯ ವರ್ಗ ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ರೂ 200/-

ಅರ್ಜಿ ಶುಲ್ಕವನ್ನು ಸಲ್ಲಿಸಿದ ಚಲನ ಪ್ರಿಂಟ್ ತೆಗೆದು ಕೊಂಡು ಎಸ್ ಬಿ ಐ ಬ್ಯಾಂಕಿನ ಯಾವುದೇ ಶಾಖೆಯ ಮೂಲಕ ಶುಲ್ಕ ಪಾವತಿಸಬಹುದಾಗಿದೆ ಶುಲ್ಕವನ್ನು ಪಾವತಿಸಿದ ವಿವರವನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲು ಸೂಚಿಸಲಾಗಿದೆ

 

ಆಯ್ಕೆ ವಿಧಾನ

ಅಭ್ಯರ್ಥಿಗಳ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮೂಲ ದಾಖಲೆ ಪರಿಶಿಲನೆಗೆ ಕರೆಯಲಾಗುವುದು

 

ಅರ್ಜಿ ಸಲ್ಲಿಸಲು ಕೊನೆ ದಿನಾಂಕ ನವೆಂಬರ್ 15 2018

 

ನೋಟಿಫಿಕೇಶನ್ 

You may also like ->

//