ಬಾಗಲಕೋಟೆ ಜಿಲ್ಲೆಯ ಡಿಸಿಸಿ ಬ್ಯಾಂಕ್ ನೇಮಕಾತಿ 2018

Share

Starts : 30-Nov--0001End : 05-Jan-2019

ಬಾಗಲಕೋಟೆ ಜಿಲ್ಲಾ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ  ಅಧಿಸೂಚನೆ ಹೊರಡಿಸಲಾಗಿದೆ
 
ಒಟ್ಟು ಹುದ್ದೆಗಳು
80
 
ಹುದ್ದೆಗಳ ವರ್ಗೀಕರಣ
ದ್ವಿತೀಯ ದರ್ಜೆ ಸಹಾಯಕರು (SDA) 44 ಹುದ್ದೆಗಳು
ವಿದ್ಯಾರ್ಹತೆ
ಬಿಎಸ್ಸಿ, ಬಿಸಿಎ,  ಬಿಕಾಂ,  ಬಿಬಿಎ, ಬಿಬಿಎಂ,  ಅಥವಾ ಬಿಎಸ್ಸಿಯಲ್ಲಿ ಕೃಷಿ ಪದವಿ ಪಡೆದಿರಬೇಕು
 
ಸಾಫ್ಟ್ವೇರ್ ಎಂಜಿನಿಯರ್ 2 ಹುದ್ದೆಗಳು
ವಿದ್ಯಾರ್ಹತೆ
ಬಿಇ /ಬಿಟೆಕ್  (ಕಂಪ್ಯೂಟರ್ ಸೈನ್ಸ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್) ಎಂಸಿಎ ಅಥವಾ 
ಎಂಎಸ್ಸಿ ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿರಬೇಕು
 
ಕಂಪ್ಯೂಟರ್ ಸಂಯೋಜಕರು 6 ಹುದ್ದೆಗಳು
ವಿದ್ಯಾರ್ಹತೆ
ಬಿ ಇ  / ಬಿಟೆಕ್  (ಕಂಪ್ಯೂಟರ್ ಸೈನ್ಸ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್)ಬಿಸಿಎ ಬಿ ಎಸ್ ಸಿ ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿರಬೇಕು
 
ವಾಹನ ಚಾಲಕರು 2 ಹುದ್ದೆಗಳು

ವಿದ್ಯಾರ್ಹತೆ

ಎಸೆಸೆಲ್ಸಿ ಓದಿರುವ ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿರುವ 5 ವರ್ಷ ಚಾಲಕರಾಗಿ ಕೆಲಸ ಮಾಡಿದ ಅನುಭವವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

 
ಸಿಪಾಯಿ ಹುದ್ದೆಗಳು 26
ವಿದ್ಯಾರ್ಹತೆ
ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
 
ಅಭ್ಯರ್ಥಿಗಳು ನಿಗದಿತ ವಿದ್ಯಾರ್ಥಿಯಲ್ಲಿ ಕನಿಷ್ಠ ಶೇಕಡ 60 ಅಂಕ ಪಡೆದು ಪಾಸಾಗಿರಬೇಕು
ಮತ್ತು ಎಸ್ ಸಿ ಎಸ್ ಟಿ ಪ್ರವರ್ಗ 1ರ ಅಭ್ಯರ್ಥಿಗಳು ಕನಿಷ್ಟ ಶೇಕಡ 55 ಅಂಕಗಳನ್ನು ಪಡೆದು ಪಾಸಾಗಿರಬೇಕು
 
ವಯೋಮಿತಿ
ಕನಿಷ್ಠ 18 ವರ್ಷಗಳು
ಗರಿಷ್ಠ  ಎಸ್ಸಿ-ಎಸ್ಟಿ  ಪ್ರವರ್ಗ 1 ಅಭ್ಯರ್ಥಿಗಳಿಗೆ  40 ವರ್ಷಗಳು
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ  38 ವರ್ಷಗಳು
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 35ವರ್ಷ ನಿಗದಿಪಡಿಸಲಾಗಿದೆ.
 
ಅರ್ಜಿ ಶುಲ್ಕ
ಉಳಿದ ವರ್ಗದ ಅಭ್ಯರ್ಥಿಗಳಿಗೆ ಗುರು 1000/-
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಹಾಗೂ ಅಂಗವಿಕಲ ಮಾಜಿ ಸೈನಿಕ ರೂ 500/-
ನವ ನಗರದಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿ ಅಥವಾ ಜಮಖಂಡಿ ಎಪಿಎಂಸಿ ಶಾಖೆಯ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ. ಡಿಡಿ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ
 
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಬ್ಯಾಂಕಿನ ವೆಬ್ ಸೈಟ್  ನಿಂದ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿ ಲಕೋಟೆಯ ಮೇಲೆ ಯಾವ ಹುದ್ದೆಗೆ ಎಂದು ಬರೆದು ಅಂಚೆ ಮೂಲಕ ಕಳುಹಿಸಬೇಕು
 
 ಅಭ್ಯರ್ಥಿಗಳಿಗೆ ಕನ್ನಡ  ಭಾಷೆ ಕಡ್ಡಾಯವಾಗಿ ಬರಬೇಕು
 
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ ನೇಮಕಾತಿಯ ಸಂಪೂರ್ಣ ವಿವರ ಇಲಾಖೆ ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿದೆ
 
ಭರ್ತಿ ಮಾಡಿದ ಅರ್ಜಿಗಳನ್ನು ಕಳುಹಿಸುವ ವಿಳಾಸ
ಸದಸ್ಯ ಕಾರ್ಯದರ್ಶಿ ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಸೆಕ್ಟರ್  ನಂಬರ್ 24 ನವನಗರ ಬಾಗಲಕೋಟೆ 5 8 7 1 0 3
 
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜನೆವರಿ 5 2019
 
Website

You may also like ->

//