ಕರ್ನಾಟಕ ಸಹಕಾರ ಮಂಡಳದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


Starts : 15-Feb-2019End : 06-Mar-2019

ಕರ್ನಾಟಕ ರಾಜ್ಯ ಸಹಕಾರ ಮಂಡಲ ನಿಯಮಿತ ಬೆಂಗಳೂರು  ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಒಟ್ಟು ಹುದ್ದೆಗಳ ಸಂಖ್ಯೆ 15
 
ಹುದ್ದೆಗಳ ವರ್ಗೀಕರಣ
 
ಸಂಪಾದಕರು 1 ಹುದ್ದೆ
 
ಸಾರ್ವಜನಿಕ ಸಂಪರ್ಕಾಧಿಕಾರಿ 1 ಹುದ್ದೆ
 
ಉಪನ್ಯಾಸಕರು 3 ಹುದ್ದೆಗಳು
 
ಜಿಲ್ಲಾ ಸಹಕಾರ ಶಿಕ್ಷಕರು 4 ಹುದ್ದೆಗಳು
 
ಮಹಿಳಾ ಸಹಕಾರ ಶಿಕ್ಷಕಿಯರು 1 ಹುದ್ದೆ
 
ಶೀಘ್ರಲಿಪಿಗಾರರು 2 ಹುದ್ದೆಗಳು
 
ಗ್ರಂಥಾಲಯ ಸಹಾಯಕರು1 ಹುದ್ದೆ
 
ವರದಿಗಾರರು1 ಹುದ್ದೆ
 
ಸ್ವಾಗತಕಾರರು1 ಹುದ್ದೆ

 
ವಿದ್ಯಾರ್ಹತೆ 

 

ಸಂಪಾದಕರು:- ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿರಬೇಕು.
ಪತ್ರಿಕೋದ್ಯಮದ ಕ್ಷೇತ್ರದಲ್ಲಿ ೧೦ ವರ್ಷಗಳ ಸೇವೆ ಸಲ್ಲಿಸಿ ಈ ಅವಧಿಯಲ್ಲಿ ಕನಿಷ್ಟ ೫ ವರ್ಷಗಳು ಸಹಕಾರಿ
ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರತಕ್ಕದ್ದು. ಜಿ.ಡಿ.ಸಿ./ಡಿ.ಸಿ.ಎಂ. ತರಬೇತಿ ಮತ್ತು ಕಂಪ್ಯೂಟರ್‌ನಲ್ಲಿ
ತರಬೇತಿ ಪಡೆದವರಿಗೆ ಪ್ರಾಶಸ್ತ್ಯ ನೀಡಲಾಗುವುದು.
 
ಸಾರ್ವಜನಿಕ ಸಂಪರ್ಕಾಧಿಕಾರಿ:- ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಮಾಸ್ ಕಂಮ್ಯೂನಿಕೇಷನ್‌ನಲ್ಲಿ
ಸ್ನಾತಕೋತ್ತರ ಪದವೀಧರರಾಗಿರಬೇಕು. ಕನಿಷ್ಠ ೫ ವರ್ಷಗಳು ಸಾರ್ವಜನಿಕ ಸಂಪರ್ಕಾಧಿಕಾರಿ ಕೆಲಸಗಳು
ನಿರ್ವಹಿಸಿದ ಮತ್ತು ಈ ಅವಧಿಯಲ್ಲಿ ಕನಿಷ್ಠ ೨ ವರ್ಷಗಳು ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವ
ಹೊಂದಿರತಕ್ಕದ್ದು. ಜಿ.ಡಿ.ಸಿ./ಡಿ.ಸಿ.ಎಂ. ತರಬೇತಿ ಮತ್ತು ಕಂಪ್ಯೂಟರ್‌ನಲ್ಲಿ ತರಬೇತಿ ಪಡೆದವರಿಗೆ ಪ್ರಾಶಸ್ತ್ಯ
ನೀಡಲಾಗುವುದು.
 
ಉಪನ್ಯಾಸಕರು:- ಅರ್ಥಶಾಸ್ತ್ರ /ಕಾನೂನು/ವಾಣಿಜ್ಯ ಶಾಸ್ತ್ರ/ಸಹಕಾರ ಇವುಗಳಲ್ಲಿ ಯಾವುದಾದರೂ ಒಂದು
ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಬೋಧನೆಯಲ್ಲಿ
ಮುಖ್ಯವಾಗಿ ಸಹಕಾರ, ಅರ್ಥಶಾಸ್ತ್ರ ಹಾಗೂ ವಾಣಿಜ್ಯ ಶಾಸ್ತ್ರದಲ್ಲಿ ಅನುಭವ ಪಡೆದವರಿಗೆ ಅದ್ಯತೆ
ನೀಡಲಾಗುವುದು. ಜೊತೆಗೆ ಜಿ.ಡಿ.ಸಿ./ಡಿ.ಸಿ.ಎಂ. ತರಬೇತಿ ಮತ್ತು ಕಂಪ್ಯೂಟರ್‌ನಲ್ಲಿ ತರಬೇತಿ ಪಡೆದವರಿಗೆ
ಪ್ರಾಶಸ್ತ್ಯ ನೀಡಲಾಗುವುದು.
 
ಜಿಲ್ಲಾ ಸಹಕಾರ ಶಿಕ್ಷಕರು:- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದವರಾಗಿರಬೇಕು.
ಸಹಕಾರ ಕ್ಷೇತ್ರದಲ್ಲಿ ಅನುಭವವನ್ನು ಪಡೆದವರಿಗೆ ಮತ್ತು ಜಿ.ಡಿ.ಸಿ./ಡಿ.ಸಿ.ಎಂ. ತರಬೇತಿ ಮಾಡಿರುವವರಿಗೆ
ಹಾಗೂ ಕಂಪ್ಯೂಟರ್‌ನಲ್ಲಿ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
 
ಮಹಿಳಾ ಸಹಕಾರ ಶಿಕ್ಷಕಿಯರು:- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದವರಾಗಿರಬೇಕು.
ಸಹಕಾರ ಕ್ಷೇತ್ರದಲ್ಲಿ ಅನುಭವವನ್ನು ಪಡೆದವರಿಗೆ ಮತ್ತು ಜಿ.ಡಿ.ಸಿ./ಡಿ.ಸಿ.ಎಂ. ತರಬೇತಿ ಮಾಡಿರುವವರಿಗೆ
ಹಾಗೂ ಕಂಪ್ಯೂಟರ್‌ನಲ್ಲಿ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು
 
ಶೀಘ್ರಲಿಪಿಗಾರರು:- ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿಯೊಂದಿಗೆ ಬೋರ್ಡ್ ಆಫ್ ಕಮರ್ಷಿಯಲ್
ಎಗ್ಜಾಮಿನೇಷನ್ಸ್ನಿಂದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸೀನಿಯರ್ ಟೈಪ್‌ರೈಟಿಂಗ್ ಹಾಗೂ
ಸೀನಿಯರ್ ಶೀಘ್ರಲಿಪಿಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
 
ಗ್ರಂಥಾಲಯ ಸಹಾಯಕರು:- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಲಿಬ್. ಪದವಿ ಪಡೆದಿರಬೇಕು
ಹಾಗೂ ಕಂಪ್ಯೂಟರ್‌ನಲ್ಲಿ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
 
ವರದಿಗಾರರು:- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮದಲ್ಲಿ ಪದವಿಯನ್ನು ಪಡೆದಿರಬೇಕು
ಹಾಗೂ ಜಿ.ಡಿ.ಸಿ./ಡಿ.ಸಿ.ಎಂ. ತರಬೇತಿ ಹಾಗೂ ಕಂಪ್ಯೂಟರ್ ತರಬೇತಿ ಪಡೆದವರಿಗೆ ಆದ್ಯತೆ
ನೀಡಲಾಗುವುದು. ಪತ್ರಿಕೋಧ್ಯಮದಲ್ಲಿ ಕನಿಷ್ಠ ಐದು ವರ್ಷಗಳ ಅನುಭವವನ್ನು ಪಡೆದವರಿಗೆ ಅಧ್ಯತೆ
ನೀಡಲಾಗುವುದು.
 
ಸ್ವಾಗತಕಾರರು ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಜೊತೆಗೆ
ಜಿ.ಡಿ.ಸಿ./ಡಿ.ಸಿ.ಎಂ. ತರಬೇತಿ ಹಾಗೂ ಕಂಪ್ಯೂಟರ್ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
 
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು;
ಅ) ಕನಿಷ್ಠ - 18  ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ
ಆ) ಗರಿಷ್ಠ•~ ವಯೋಮಿತಿಯನ್ನು ಮೀರಿರಬಾರದು.
 
ಅಭ್ಯರ್ಥಿಗಳು ಗರಿಷ್ಠ ~ ವಯೋಮಿತಿ.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ
ಪ್ರವರ್ಗ ೨ಎ, ೨ಬಿ, ೩ಎ, ೩ಬಿ ಅಭ್ಯರ್ಥಿಗಳಿಗೆ 28 ವರ್ಷ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-೧ ಅಭ್ಯರ್ಥಿಗಳಿಗೆ 40 ವರ್ಷ
 
ಅರ್ಜಿ ಶುಲ್ಕ.
ಸಾಮಾನ್ಯ ಅರ್ಹತೆ, ಪ್ರವರ್ಗ ೨(ಎ), ೨(ಬಿ), ೩(ಎ), ೩(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ ರೂ.500.00
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ- ೧ ರೂ.250.00
 
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ
 
೧) ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ:15.02.2019
೨) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06.03.2019
೩) ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ:18.03.2019

ವೆಬ್ಸೈಟ್ 
ನೋಟಿಫಿಕೇಶನ್ 
 

You may also like ->