ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ 2019

Share

Starts : 03-Jun-2019End : 04-May-2019

ಕರ್ನಾಟಕ ಸರ್ಕಾರದ ನಿರ್ದೇಶನಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿರುವ ಮಾಜಿ ಸೈನಿಕರಿಗಾಗಿ ದ್ವಿತೀಯ ದರ್ಜೆ
ಸಹಾಯಕರು, ಕಲ್ಯಾಣ ಸಂಘಟಿಕರು, ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
 
ಹುದ್ದೆಗಳ ವಿವರಗಳು
ದ್ವಿತೀಯ ದರ್ಜೆ ಸಹಾಯಕರು - 13
ಕಲ್ಯಾಣ ಸಂಘಟಿಕರು -08
ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು - 27
 
ವಿದ್ಯಾರ್ಹತೆ
ದ್ವಿತೀಯ ದರ್ಜೆ ಸಹಾಯಕರ, ಕಲ್ಯಾಣ ಸಂಘಟಿಕರು ಮತ್ತು ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು ಹುದ್ದೆಗಳಿಗೆ
ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ 81 ಸೇವನೆ 2017, ದಿನಾಂಕ: 27.02.2018 ರ ವಿದ್ಯಾರ್ಹತೆ
1. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ಪಿ.ಯು.ಸಿ ವಿದ್ಯಾರ್ಹತೆ
ತತ್ಸಮಾನ ವಿದ್ಯಾರ್ಹತೆಗಳು
 2. ಸಿ.ಬಿ.ಎಸ್.ಇ. ಮತ್ತು ಐ.ಎಸ್.ಸಿ. ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ.
3. ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ.
3. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಓ.ಎಸ್.) ವತಿಯಿಂದ ನಡೆಸುವ ಉನ್ನತ ಪ್ರೌಢ
ಶಿಕ್ಷಣ ಕೋರ್ಸ್/ ಹೆಚ್.ಎಸ್.ಸಿ..
4. ಮೂರು ವರ್ಷಗಳ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐ.ಟಿ.ಐ. ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ
ಶಿಕ್ಷಣ ಡಿಪ್ಲೊಮಾ (ಜೆ.ಓ.ಸಿ/ ಜೆ.ಓ.ಡಿ.ಸಿ/ ಜೆ.ಎಲ್.ಡಿ.ಸಿ) ಅಭ್ಯರ್ಥಿಗಳು ಎನ್.ಐ.ಒ.ಎಸ್. ನ ವತಿಯಿಂದ
ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ
ಪದವಿಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ
ಉತ್ತೀರ್ಣರಾದಲ್ಲಿ ಮಾತ್ರ ಪಿ.ಯು.ಸಿ.ಗೆ ತತ್ಸಮಾನವೆಂದು ಪರಿಗಣಿಸಬಹುದು. 

 
ಅರ್ಜಿಶುಲ್ಕ
ದ್ವಿತೀಯ ದರ್ಜೆ ಸಹಾಯಕರ, ಕಲ್ಯಾಣ ಸಂಘಟಿಕರು ಮತ್ತು ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು ಈ ಹುದ್ದೆಗಳಿಗೆ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿಗಳನ್ನು ಆಹ್ವಾನಿಸಿರುವುದರಿಂದ ಪರೀಕ್ಷಾ ಶುಲ್ಕವನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ
 
ವೇತನ ಶ್ರೇಣಿ
ಅ) ದ್ವಿತೀಯ ದರ್ಜೆ ಸಹಾಯಕರ, ಕಲ್ಯಾಣ ಸಂಘಟಿಕರು ಮತ್ತು ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು ಹುದ್ದೆಗಳಿಗೆ
 (ಪರಿಷ್ಕøತ ವೇತನ):  ರೂ. 21400-500-22400-550-24600-600-27000-650-29600-750-32600-850-36000-950-39800- 1100-42000/-

 
ಶುಲ್ಕವನ್ನು ಆನ್ಲೈನ್  ಮೂಲಕವೇ ಸಲ್ಲಿಸತಕ್ಕದ್ದು
ಸಾಮಾನ್ಯ ಅರ್ಹತೆ, 2(ಎ),2(ಬಿ),3(ಎ),3(ಬಿ)ಗೆ ಸೇರಿದ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50/-
ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಪ್ರವರ್ಗ-1ಗೆ ಸೇರಿದ ಮಾಜಿ
ಸೈನಿಕ ಅಭ್ಯರ್ಥಿಗಳಿಗೆ ವಿನಾಯಿತಿ
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 06.03.2019
ಅರ್ಜಿ ಸಲ್ಲಿಸಲು ಕೊನೆಯದಿನಾಂಕ  05.04.2019
ಶುಲ್ಕ ಪಾವತಿಸಲು ಕೊನೆಯ ದಿನಾಂಕ  08.04.2019

 
Notification
Website

You may also like ->

//