ವಿಜಯನಗರ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ನೇಮಕಾತಿ - 2019

Share

Starts : 06-May-2019End : 17-May-2019

ವಿಜಯನಗರ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ನೇಮಕಾತಿ - 2019
 ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಲ್ಲಿ ಖಾಲಿ ಇರುವ  ಗ್ರೂಪ್‌ ಎ, ಬಿ ಮತ್ತು ಸಿ ವೃಂದದ ಬೋಧಕೇತರ ಹಾಗೂ ಬೋಧಕ  ಹುದ್ದೆಗಳ ನೇಮಕಕ್ಕೆ ಮರು ಅಧಿಸೂಚನೆ ಹೊರಡಿಸಿದೆ.  ಅರ್ಹ ಅಭ್ಯರ್ಥಿಗಳು ಮೇ 17ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
 
ಒಟ್ಟು ಹುದ್ದೆಗಳು -55
 ಬೋಧಕೇತರ ಹುದ್ದೆಗಳ ವಿವರ
 
ಗ್ರೂಪ್‌ ಎ: ಉಪ ಕುಲಸಚಿವರು - 01
 
ಸಹಾಯಕ ಕುಲ ಸಚಿವರು -02
 
ವಿದ್ಯಾರ್ಹತೆ
ಮೊದಲ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಹಾಗೂ ಅಡ್ಮಿನಿಸ್ಪ್ರೇಟಿವ್‌/ಅಕಾಡೆಮಿಕ್‌ ಕ್ಷೇತ್ರದಲ್ಲಿ ಉಪಕುಲಸಚಿವರ ಹುದ್ದೆಗೆ 10 ವರ್ಷ ಹಾಗೂ ಸಹಾಯಕ ಕುಲ ಸಚಿವರ ಹುದ್ದೆಗೆ ಐದು ವರ್ಷ ಕಾರ್ಯನಿರ್ವಹಿಸಿದ ಅನುಭವ ಇರಬೇಕು. ಸಹಾಯಕ ಗ್ರಂಥಪಾಲಕ ಹುದ್ದೆಗೆ ಯುಜಿಸಿ ನಿಯಮಗಳ ಪ್ರಕಾರ ಅರ್ಹತೆ ನಿಗದಿಪಡಿಸಲಾಗಿದೆ.
 
ಗ್ರೂಪ್‌ ಬಿ:
ಕಚೇರಿ ಅಧೀಕ್ಷಕರು - 02
ವಿದ್ಯಾರ್ಹತೆ - ಪದವೀಧರರು.
 
ಸಹಾಯಕ ಗ್ರಂಥಪಾಲಕ ಗ್ರೇಡ್‌-2 - 01
ವಿದ್ಯಾರ್ಹತೆ - ಲೈಬ್ರರಿ ಇನ್‌ಫಾರ್ಮೇಶನ್‌ ಸೈನ್ಸ್‌ ವಿಷಯದಲ್ಲಿ ಪದವಿ ಪಡೆದವರು.
 
ಕಂಪ್ಯೂಟರ್‌ ಎಂಜಿನಿಯರ್‌ - 01
ವಿದ್ಯಾರ್ಹತೆ - ಎಂಜಿನಿಯರಿಂಗ್‌ ಪದವೀಧರರು.
 
ಅಸಿಸ್ಟೆಂಟ್‌ ಎಂಜಿನಿಯರ್‌ - 01
ವಿದ್ಯಾರ್ಹತೆ - ಬಿಇ(ಮೆಕ್ಯಾನಿಕಲ್‌/ಎಲೆಕ್ಟ್ರಿಕಲ್‌/ಮೆಕ್ಯಾನಿಕಲ್‌).
 
ಗ್ರೂಪ್‌ ಸಿ:
ಪ್ರಥಮ ದರ್ಜೆ ಸಹಾಯಕ - 01
ಸಹಾಯಕ ಕಚೇರಿ ಅಧೀಕ್ಷಕರು - 01
ಶೀಘ್ರಲಿಪಿಗಾರರು - 02
ಸ್ಟೋರ್‌ ಕೀಪರ್‌ - 01
ಲ್ಯಾಬ್‌ ಅಸಿಸ್ಟೆಂಟ್‌ - 02
 
ವಿದ್ಯಾರ್ಹತೆ - ಮೇಲೆ ಕಾಣಿಸಿದ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಪದವಿ.
 
ದ್ವಿತೀಯ ದರ್ಜೆ ಸಹಾಯಕರು - 15
ಬೆರಳಚ್ಚುಗಾರ - 04
ವಿದ್ಯಾರ್ಹತೆ - ದ್ವಿತೀಯ ಪಿಯುಸಿ ಓದಿದವರು.
 
ವಾಹನ ಚಾಲಕ - 01
ವಿದ್ಯಾರ್ಹತೆ - ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಚಾಲನಾ ಪರವಾನಗಿ ಹೊಂದಿರಬೇಕು.
 
ಬೋಧಕ ಹುದ್ದೆಗಳ ವಿವರ
ಪ್ರೊಫೆಸರ್ - 02
ಅಸೋಸಿಯೇಟ್ ಪ್ರೊಫೆಸರ್ - 03
 
ವಯೋಮಿತಿ: ಅಭ್ಯರ್ಥಿಗಳ ವಯಸ್ಸು 18ರಿಂದ 35 ವರ್ಷದೊಳಗಿರಬೇಕು. 2ಎ,2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ ವಯೋಮಿತಿ 38 ವರ್ಷ ಹಾಗೂ ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ.
 
ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದೆ. ಉಳಿದ ಎಲ್ಲಾ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸಬೇಕು.
 
ಆಯ್ಕೆವಿಧಾನ - ಲಿಖಿತ ಪರೀಕ್ಷೆ.
 
ಅರ್ಜಿ ಸಲ್ಲಿಕೆ
ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ನಮೂನೆಯನ್ನು ವಿಶ್ವ ವಿದ್ಯಾಲಯ ಅಂತರ್ಜಾಲ ತಾಣದಲ್ಲಿ ಡೌನಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ 08 ಸೆಟ್ ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಪ್ರತೇಕ ಹುದ್ದೆಗಳಿಗೆ ಪ್ರತೇಕ ಅರ್ಜಿ ಸಲ್ಲಿಸಬೇಕು.
 
ಅರ್ಜಿ ಸಲ್ಲಿಸಬೇಕಾದ ವಿಳಾಸ: - ಕುಲ ಸಚಿವರು, ವಿಜಯನಗರ ಕೃಷ್ಣದೇವರಾಯ ವಿವಿ, ಜ್ಞಾನಸಾಗರ ಆವರಣ, ವಿನಾಯಕ ನಗರ, ಕಂಟೋನ್ಮೆಂಟ್‌, ಬಳ್ಳಾರಿ.
 
ಸಹಾಯವಾಣಿ ಸಂಖ್ಯೆ: 08392- 242703
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :  ಮೇ 06, 2019
ಬೋಧಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಮೇ 14, 2019
ಬೋಧಕೇತರ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಮೇ 17, 2019
 
 ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 Notification

You may also like ->

//