ಬೋಧಕ ಹುದ್ದೆಗಳಿಗೆ ನೇಮಕಾತಿ - 2019

Share

Starts : 01-Jun-2019End : 28-Jun-2019

ಬೋಧಕ ಹುದ್ದೆಗಳಿಗೆ ನೇಮಕಾತಿ - 2019
ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಂಸ್ಥೆ ಜಾಲತಾಣದಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಕೆಳಗೆ ನೀಡಿರುವ ರಿಜಿಸ್ಟರ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಬೇಕು.ಆಸಕ್ತ ಅಭ್ಯರ್ಥಿಗಳು ಜೂನ್‌ 28 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
 
ಈ ಕೆಳಗೆ ನೀಡಿರುವ ವಿಷಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಹುದ್ದೆಗಳ ವಿವರ
ಕನ್ನಡ - 03
ಇಂಗ್ಲಿಷ್‌ - 03
ಹಿಂದಿ-03
ಸಂಸ್ಕೃತ - 01
ಸೋಷಿಯಾಲಜಿ - 01
ಜಿಯೋಗ್ರಫಿ - 01
ಪೊಲಿಟಿಕಲ್‌ ಸೈನ್ಸ್‌- 01
ಕಾಮರ್ಸ್‌-12
ಫಿಸಿಕ್ಸ್‌-04
ಕೆಮಿಸ್ಟ್ರಿ - 06
ಮ್ಯಾಥ್ಸ್‌ - 06
ಬಾಟನಿ - 02
ಜಿಯೋಲಜಿ-05
ಫಿಸಿಕಲ್‌ ಎಜುಕೇಶನ್‌ ಡೈರೆಕ್ಟರ್‌ - 02
ಲೈಬ್ರರಿಯನ್‌ - 2
 
ವಿದ್ಯಾರ್ಹತೆ
ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡಾ 55 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಭ್ಯರ್ಥಿಗಳು ಕಡ್ಡಾಯವಾಗಿ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅಸಿಸ್ಟೆಂಟ್‌ ಪ್ರೊಫೆಸರ್‌ ನೇಮಕಕ್ಕೆ ಸಂಬಂಧಪಟ್ಟಂತೆ ಯುಜಿಸಿ ನಿಗದಿಪಡಿಸಿರುವ ನಿಯಮಾವಳಿಗಳು ಸಂದರ್ಭಕ್ಕನುಸಾರ ಅನ್ವಯಿಸಲಾಗುವುದು
ಪರಿಶಿಷ್ಟ ಜಾತಿ/ ಪಂಗಡದ ಅಭ್ಯರ್ಥಿಗಳಿಗೆ ಶೇಕಡಾ 50 ಅಂಕಗಳನ್ನು ನಿಗದಿಪಡಿಸಲಾಗಿದೆ.
ಕೋರ್ಸ್‌ ವರ್ಕ್‌ನೊಂದಿಗೆ ಪಿಎಚ್‌.ಡಿ ಹೊಂದಿರುವ ಅಭ್ಯರ್ಥಿಗಳಿಗೆ ನೆಟ್‌/ಸ್ಲೆಟ್‌ ಪರೀಕ್ಷೆಯಿಂದ ವಿನಾಯ್ತಿ ನೀಡಲಾಗುತ್ತದೆ.
 
ವಯೋಮಿತಿ
ಕನಿಷ್ಠ - 22
ಗರಿಷ್ಠ - 40
ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ 45 ವರ್ಷ.
ಒಬಿಸಿ ಅಭ್ಯರ್ಥಿ - 43
 
ಅರ್ಜಿ ಶುಲ್ಕ - 1000/-
ಅರ್ಜಿ ಶುಲ್ಕವನ್ನು 'ಜೆಎಸ್‌ಎಸ್‌ ಮಹಾವಿದ್ಯಾಪೀಠ, ಮೈಸೂರು' ಇವರ ಹೆಸರಿನಲ್ಲಿ ಡಿಡಿ ಪಡೆದು ಕಳುಹಿಸುವಂತೆ ಸೂಚಿಸಲಾಗಿದೆ.
 
ಅರ್ಜಿಯ ಒಂದು ಪ್ರತಿಯನ್ನು ಈ ವಿಳಾಸಕ್ಕೂ ಕಳುಹಿಸಿ -  ಜಂಟಿ ನಿರ್ದೇಶಕರು, ಪದವಿ ಶಿಕ್ಷಣ ಇಲಾಖೆ, ಪ್ರಾದೇಶಿಕ ಕಚೇರಿ, ಮೈಸೂರು.
 
ಅರ್ಜಿ ಸಲ್ಲಿಸಲು ಅಂಚೆ  ವಿಳಾಸ:
ಕಾರ್ಯನಿರ್ವಾಹಕ ಕಾರ್ಯದರ್ಶಿ, ಜೆಎಸ್‌ಎಸ್‌ ಮಹಾವಿದ್ಯಾಪೀಠ, ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ವೃತ್ತ, ಮೈಸೂರು-04.
 
ಜಾಬ್ ಸ್ಥಳ: ಮೈಸೂರು, ಕರ್ನಾಟಕ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :01/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :28/06/2019
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
Website
Notification
 

You may also like ->

//