ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಮಲೆಕ್ಕಾಧಿಕಾರಿ ನೇಮಕಾತಿ 2019

Share

Starts : 04-Jun-2019End : 04-Jul-2019

ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಮಲೆಕ್ಕಾಧಿಕಾರಿ ನೇಮಕಾತಿ 2019
ಬಾಗಲಕೋಟೆ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 58 ಗ್ರಾಮಲೆಕ್ಕಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ದಿನಾಂಕ 4/07/2019 ಕೊನೆಯ ದಿನದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 59
 
ಹುದ್ದೆಯ ಹೆಸರು
ಗ್ರಾಮಲೆಕ್ಕಿಗ
 
ವಿದ್ಯಾರ್ಹತೆ
ಅಭ್ಯರ್ಥಿಗಳು ಪಿಯುಸಿ ಪರೀಕ್ಷೆ ಅಥವಾ ಸಿಬಿಎಸ್ಸಿ ಅಥವಾ ಐಸಿಎಸ್ಇ ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
 
ವಯೋಮಿತಿ
ಕನಿಷ್ಠ -  18 ವರ್ಷ.
ಸಾಮಾನ್ಯ ಅಭ್ಯರ್ಥಿಗಳು ಗರಿಷ್ಟ - 35 ವರ್ಷ.
2ಎ,2ಬಿ,3ಎ ಮತ್ತು 3ಬಿ ಅಭ್ಯರ್ಥಿಗಳು ಗರಿಷ್ಟ - 38
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ರ ಗರಿಷ್ಟ - 40 ವರ್ಷ
 
ವೇತನ ಪ್ರತಿ ತಿಂಗಳು
ರೂ.21,400/- ರಿಂದ 42,000/-ರೂ.
 
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಪಿಯುಸಿ ಪರೀಕ್ಷೆ ಅಥವಾ ಸಿ.ಬಿ.ಎಸ್.ಇ ಅಥವಾ ಐ.ಸಿ.ಎಸ್.ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯಾ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು.
 
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.50/-
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.200/-
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬಹುದು.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :04/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :04/07/2019
ಶುಲ್ಕ ಪಾವತಿ ಕೊನೆಯ ದಿನಾಂಕ: 04/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Notification

ಅಪ್ಲಿಕೇಶನ್ ಫಾರಂ 

 

You may also like ->

//