ಬೋಧಕೇತರ ಹುದ್ದೆಗಳಿಗೆ ಅರ್ಜಿ ಅಹ್ವಾನ

Share

Starts : 19-Jun-2019End : 17-Jun-2019

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ನೇಮಕಾತಿ 2019
ಮಂಗಳೂರಿನ ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ) 137 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು 17 ಜುಲೈ 2019 ರೊಳಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
 ಒಟ್ಟು ಹುದ್ದೆಗಳು - 137
 
ಹುದ್ದೆಗಳ ವಿವರ
 
1 ಗ್ರೂಪ್‌-ಬಿ
ಟೆಕ್ನಿಕಲ್‌ ಅಸಿಸ್ಟೆಂಟ್‌/ಜೂನಿಯರ್‌ ಎಂಜಿನಿಯರ್‌/ ಲೈಬ್ರರಿ ಆ್ಯಂಡ್‌ ಇನ್‌ಫಾರ್ಮೆಷನ್‌ ಅಸಿಸ್ಟೆಂಟ್‌/ ಎಸ್‌ಎಎಸ್‌ ಅಸಿಸ್ಟೆಂಟ್‌-32, ಸೂಪರಿಂಟೆಂಡೆಂಟ್‌-09.
 
ಗ್ರೂಪ್‌-ಸಿ
ಸೀನಿಯರ್‌ ಟೆಕ್ನಿಷಿಯನ್‌-17, ಟೆಕ್ನಿಷಿಯನ್‌-32, ಸೀನಿಯರ್‌ ಅಸಿಸ್ಟೆಂಟ್‌-10, ಜೂನಿಯರ್‌ ಅಸಿಸ್ಟೆಂಟ್‌-19, ಆಫೀಸ್‌ ಅಟೆಂಡೆಂಟ್‌/ಲ್ಯಾಬ್‌ ಅಟೆಂಡೆಂಟ್‌-18.
 
ವಿದ್ಯಾರ್ಹತೆ - ಗ್ರೂಪ್‌-ಬಿ ಹುದ್ದೆಗಳಿಗೆ
 
ಟೆಕ್ನಿಕಲ್‌ ಅಸಿಸ್ಟೆಂಟ್‌ ಹುದ್ದೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಬಿಇ/ಬಿಟೆಕ್‌/ಎಂಸಿಎ ಅಥವಾ ಎಂಜಿನಿಯರಿಂಗ್‌ ಡಿಪ್ಲೊಮಾ ಅಥವಾ ವಿಜ್ಞಾನ ಪದವಿ/ಸ್ನಾತಕೋತ್ತರ ಪದವಿ.
ಜೂನಿಯರ್‌ ಎಂಜಿನಿಯರ್‌ ಹುದ್ದೆಗೆ ಸಿವಿಲ್‌/ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿಟೆಕ್‌ ಅಥವಾ ಡಿಪ್ಲೊಮಾ.
ಲೈಬ್ರರಿ ಅಸಿಸ್ಟೆಂಟ್‌ಗೆ ಯಾವುದೇ ವಿಷಯದಲ್ಲಿ ಪದವಿ.
ಎಸ್‌ಎಎಸ್‌ ಅಸಿಸ್ಟೆಂಟ್‌ ಹುದ್ದೆಗೆ ಫಿಸಿಕಲ್‌ ಎಜುಕೇಷನ್‌ನಲ್ಲಿ ಪದವಿ,
ಸೂಪರಿಂಟೆಂಡೆಂಟ್‌ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ. 
 
ವಿದ್ಯಾರ್ಹತೆ - ಗ್ರೂಪ್‌ ಸಿ ಹುದ್ದೆಗಳಿಗೆ
 
ಸೀನಿಯರ್‌ ಟೆಕ್ನಿಷಿಯನ್‌, ಟೆಕ್ನಿಷಿಯನ್‌ ಹುದ್ದೆಗಳಿಗೆ ಪಿಯುಸಿ(ವಿಜ್ಞಾನ) ಅಥವಾ ಪಿಯುಸಿ (ವಿಜ್ಞಾನ) ಮತ್ತು ಐಟಿಐ (1 ವರ್ಷದ) ಅಥವಾ 10ನೇ ತರಗತಿ ಮತ್ತು ಸಂಬಂಧಪಟ್ಟ ಟ್ರೇಡ್‌ಗಳಲ್ಲಿ 2 ವರ್ಷದ ಐಟಿಐ ಕೋರ್ಸ್‌ ಪೂರ್ಣಗೊಳಿಸಿರಬೇಕು.ಎಂಜಿನಿಯರಿಂಗ್‌ ಡಿಪ್ಲೊಮಾ.
ಸೀನಿಯರ್‌ ಅಸಿಸ್ಟೆಂಟ್‌, ಜೂನಿಯರ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಮತ್ತು ನಿಮಿಷಕ್ಕೆ 35 ಪದ ಟೈಪಿಂಗ್‌ ಮತ್ತು ಕಂಪ್ಯೂಟರ್‌ ವರ್ಡ್‌ ಪ್ರೊಸೆಸಿಂಜ್‌,ಡ್‌ಶೀಟ್‌ ಜ್ಞಾನ.
ಆಫೀಸ್‌ ಅಟೆಂಡೆಂಟ್‌ಗೆ 1ದ್ವಿತೀಯ ಪಿಯುಸಿ ಮತ್ತು ಲ್ಯಾಬ್‌ ಅಟೆಂಡೆಂಟ್‌ಗೆ ವಿಜ್ಞಾನದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಪಡೆದವರೂ ಅರ್ಜಿ ಸಲ್ಲಿಸಬಹುದು.
 
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಬಳಿಕ ಭರ್ತಿ ಮಾಡಿದ ಆನ್‌ಲೈನ್‌ ಅರ್ಜಿ ಪ್ರತಿಯ ಪ್ರಿಂಟೌಟ್‌ ತೆಗೆದು, ಸಂಬಂಧಪಟ್ಟ ದಾಖಲೆಪತ್ರಗಳನ್ನು ಸ್ವಯಂ ದೃಢೀಕರಿಸಿ ಲಗ್ಗತ್ತಿಸಿ, ಸ್ಪೀಡ್‌ ಪೋಸ್ಟ್‌/ರಿಜಿಸ್ಟ್ರಾರ್ಡ್‌ ಪೋಸ್ಟ್‌ ಮೂಲಕ ಎನ್‌ಐಟಿಗೆ ಕಳುಹಿಸಬೇಕು.
 
ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ: ರೂ. 500 / -
ಇಡಬ್ಲ್ಯೂಎಸ್: ರೂ. 250 / -   
ಪಿಡಬ್ಲ್ಯೂಡಿ / ಎಸ್ಸಿ / ಎಸ್ಟಿ: ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :19/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :17/07/2019
ಹಾರ್ಡ್‌ಕಾಪಿ ಸಲ್ಲಿಸಲು ಕೊನೆಯ ದಿನಾಂಕ:19/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website 
Notification
 
 
 

You may also like ->

//