ಬೋಧಕ-ಬೋಧಕೇತರ ಹುದ್ದೆಗಳ ನೇಮಕಾತಿ 2019

Share

Starts : 24-Jun-2019End : 10-Jul-2019

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಕಾತಿ 2019
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ-ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಜುಲೈ 10 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು -  24
 
ಹುದ್ದೆಗಳ ವಿವರ
ಡರ್ಮಟಾಲಜಿ, ಜನರಲ್‌ ಮೆಡಿಸಿನ್‌, ರೇಡಿಯೋಲಜಿ, ಜನರಲ್‌ ಸರ್ಜರಿ, ರೇಡಿಯೋಥೆರಪಿ, ಪೆಥಾಲಜಿ, ಗೈನಾಕಾಲಜಿ, ಆರ್ಥೋಪೆಡಿಕ್‌, ಕಾಶುವಲಿಟಿ ಮೆಡಿಕಲ್‌ ಆಫೀಸರ್‌, ಲೇಡಿ ಮೆಡಿಕಲ್‌ ಆಫೀಸರ್‌ ಮತ್ತು ಇಕೋ ಟೆಕ್ನಿಷಿಯನ್‌ ವಿಭಾಗಗಳಲ್ಲಿ ಒಟ್ಟು 24 ಹುದ್ದೆಗಳು.
 
ವಿದ್ಯಾರ್ಹತೆ
ವಿದ್ಯಾರ್ಹತೆ, ವಯೋಮಿತಿ, ಬೋಧನಾನುಭವ ಮತ್ತು ಸಂಶೋಧನಾ ಪ್ರಕಟಣೆಗಳು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೃಂದ ಮತ್ತು ನೇಮಕಾತಿಗಳ ಅನುಸಾರವಾಗಿ ಇರಬೇಕು.
 
ಅರ್ಜಿ ಶುಲ್ಕ
ನಿಗದಿಪಡಿಸಿದ 500 ರೂ. ಶುಲ್ಕವನ್ನು 'The Director,HIMS Hassan' ಹೆಸರಿನಲ್ಲಿ ಡಿಡಿ ಪಡೆದು ಪಾವತಿಸಬೇಕು.
 
ಗಮನಿಸಿ
1 ಬೋಧಕ-ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಜುಲೈ 12ರಂದು ಸಂದರ್ಶನ ನಡೆಸಲಿದೆ.
2 ಈಗಾಗಲೇ 2019ರ ಮಾರ್ಚ್‌ 7ರ ಅಧಿಸೂಚನೆಗನುಗುಣವಾಗಿ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ, ಹಿಂದಿನ ಅರ್ಜಿಯನ್ನೇ ಪರಿಗಣಿಸಲಾಗುವುದು. ಹೆಚ್ಚುವರಿ ವಿದ್ಯಾರ್ಹತೆಗಳಿದ್ದಲ್ಲಿ ಸಂದರ್ಶನ ದಿನದಂದು ಹಾಜರುಪಡಿಸಬಹುದು. ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :24/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10/07/2019
ಸಂದರ್ಶನದ ದಿನಾಂಕ:12/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification
 
 

You may also like ->

//